ಕೊಲಂಬೊ: ಶ್ರೀಲಂಕಾ ಹಾಗೂ ಭಾರತದ ನಡುವಿನ ದ್ವಿಪಕ್ಷೀಯ ಒಪ್ಪಂದದಲ್ಲಿ ಉಭಯ ರಾಷ್ಟ್ರಗಳ ನಡುವಿನ ನೌಕಾಪಡೆಯ ಸಹಕಾರವೂ ಬಹಳ ಪ್ರಮುಖವಾಗಿದೆ ಎಂದು ಶ್ರೀಲಂಕಾದಲ್ಲಿರುವ ಭಾರತೀಯ ಹೈ ಕಮಿಷನರ್ ಗೋಪಾಲ್ ಬಾಗ್ಲೆ ಒತ್ತಿ ಹೇಳಿದ್ದಾರೆ.

ಅವರು ಶ್ರೀಲಂಕಾದ ಉತ್ತರ ಮತ್ತು ಪೂರ್ವ ಪ್ರಾಂತ್ಯಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಪ್ರತಿಷ್ಠಿತ ನೌಕಾಪಡೆ ಮತ್ತು ಸಾಗರ ಅಕಾಡೆಮಿಯಲ್ಲಿ (ಎನ್ಎಂಎ)ನಡೆದ ಸಮಾರಂಭದಲ್ಲಿ ಶ್ರೀಲಂಕಾದ ನೌಕಾಪಡೆಯ ಕಮಾಂಡರ್ ಅವರಿಗೆ ₹ 81 ಲಕ್ಷ ಮೌಲ್ಯದ ನೌಕಾಪಡೆಯ ತರಬೇತಿ ಪರಿಕರಗಳನ್ನು ಹಸ್ತಾಂತರಿಸಿ ಮಾತನಾಡಿದರು.

ಶ್ರೀಲಂಕಾದ ನೌಕಪಡೆಯ ಸಾಮರ್ಥ್ಯ ವೃದ್ಧಿಸುವುದಕ್ಕಾಗಿ ಕೆಲವೊಂದು ತರಬೇತಿ ಪರಿಕರಗಳನ್ನು ನೀಡುವುದಾಗಿ 2019ರ ಡಿಸೆಂಬರ್ನಲ್ಲಿ ಇಲ್ಲಿಗೆ ಭೇಟಿ ನೀಡಿದ್ದ ಭಾರತೀಯ ನೌಕಾಪಡೆಯ ಸ್ಟಾಫ್ ಅಡ್ಮಿರಲ್ ಮುಖ್ಯಸ್ಥ ಕರಂಬೀರ್ ಸಿಂಗ್ ಭರವಸೆ ನೀಡಿದ್ದರು ಎಂದು ಗೋಪಾಲ್ ಬಾಗ್ಲೆ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.