ವಿಂಡ್ಹೋಕ್: ಇಂಧನ, ಆರೋಗ್ಯ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ದ್ವಿಪಕ್ಷೀಯ ಸಹಕಾರವನ್ನು ಬೆಂಬಲಿಸುವ ನಾಲ್ಕು ಒಪ್ಪಂದಗಳಿಗೆ ಭಾರತ ಹಾಗೂ ನಮೀಬಿಯಾ ಬುಧವಾರ ಸಹಿ ಹಾಕಿವೆ.

ಐದು ರಾಷ್ಟ್ರಗಳ ಪ್ರವಾಸದ ಭಾಗವಾಗಿ ಬ್ರೆಜಿಲ್ನಿಂದ ನಮೀಬಿಯಾಗೆ ಭೇಟಿ ನೀಡಿರುವ ಪ್ರಧಾನಿ ನರೇಂದ್ರ ಮೋದಿ, ನಮೀಬಿಯಾ ಅಧ್ಯಕ್ಷೆ ನೆತುಂಬೊ ನಾಂಡಿ–ದೇತ್ವ ಅವರೊಂದಿಗೆ ಆರೋಗ್ಯ ಮತ್ತು ಔಷಧ, ಜೈವಿಕ ಇಂಧನ, ವಿಪತ್ತು ನಿರ್ವಹಣೆ ಸೇರಿದಂತೆ ಹಲವು ವಿಚಾರಗಳ ಬಗ್ಗೆ ಚರ್ಚಿಸಿದ್ದಾರೆ. ನಂತರ, ಉಭಯ ನಾಯಕರು ಒಪ್ಪಂದಗಳಿಗೆ ಸಹಿ ಮಾಡಿದ್ದಾರೆ.

ಅಧ್ಯಕ್ಷೆ ನೆತುಂಬೊ ಅವರ ಆಹ್ವಾನದ ಮೇರೆಗೆ ಇಲ್ಲಿಗೆ ಭೇಟಿ ನೀಡಿರುವ ಮೋದಿ, ನಮೀಬಿಯಾವನ್ನು ಆಫ್ರಿಕಾದಲ್ಲಿರುವ 'ಮೌಲ್ಯಯುತ ಹಾಗೂ ವಿಶ್ವಾಸಾರ್ಹ ಪಾಲುದಾರ ರಾಷ್ಟ್ರ' ಎಂದು ಬಣ್ಣಿಸಿದ್ದಾರೆ.

ಇದೇ ಮೊದಲ ಬಾರಿಗೆ ನಮೀಬಿಯಾಗೆ ಬಂದಿರುವ ಮೋದಿ, ಈ ದೇಶಕ್ಕೆ ಭೇಟಿ ಕೊಟ್ಟ ಭಾರತದ ಮೂರನೇ ಪ್ರಧಾನಿ ಎನಿಸಿದರು.

ನಮೀಬಿಯಾ ಭೇಟಿಗೂ ಮುನ್ನ ಮೋದಿ ಅವರು, ಘಾನಾ, ಟ್ರಿನಿಡಾಡ್ ಆ್ಯಂಡ್ ಟೊಬಾಗೊ ಮತ್ತು ಅರ್ಜೇಂಟೀನಾ, ಬ್ರೆಜಿಲ್ ಪ್ರವಾಸ ಮುಗಿಸಿದ್ದಾರೆ.

ಅತ್ಯುನ್ನತ ನಾಗರಿಕ ಗೌರವ

ನಮೀಬಿಯಾ ಅಧ್ಯಕ್ಷೆ ನೆತುಂಬೊ ಅವರು, ಮೋದಿ ಅವರಿಗೆ ದೇಶದ ಅತ್ಯುನ್ನತ ನಾಗರಿಕ ಗೌರವ 'ಆರ್ಡರ್ ಆಫ್ ದಿ ಮೋಸ್ಟ್ ಏನ್ಸಿಯೆಂಟ್ ವೆಲ್ವಿಟ್ಸ್ಚಿಯಾ ಮಿರಾಬಿಲಿಸ್' ಪ್ರದಾನ ಮಾಡಿದ್ದಾರೆ.

2014ರಲ್ಲಿ ಮೊದಲ ಬಾರಿಗೆ ಪ್ರಧಾನಿಯಾದಾಗಿನಿಂದ ಮೋದಿ ಅವರಿಗೆ ವಿದೇಶಿ ಸರ್ಕಾರಗಳಿಂದ ದೊರೆತ 27ನೇ ಅಂತರರಾಷ್ಟ್ರೀಯ ಗೌರವ ಇದಾಗಿದೆ.

ಪ್ರಸ್ತುತ ಐದು ರಾಷ್ಟ್ರಗಳ ಪ್ರವಾಸದ ಸಂದರ್ಭದಲ್ಲಿ ಘಾನಾ ಹಾಗೂ ಬ್ರೆಜಿಲ್ನ ಅತ್ಯುನ್ನತ ನಾಗರಿಕ ಪ್ರಶಸ್ತಿಗಳೂ ಮೋದಿಗೆ ಸಂದಿವೆ.
.ಪ್ರಧಾನಿ ಮೋದಿಗೆ ಬ್ರೆಜಿಲ್ನ ಅತ್ಯುನ್ನತ ನಾಗರಿಕ ಪ್ರಶಸ್ತಿ ಗೌರವ.ಪ್ರಧಾನಿ ಮೋದಿಗೆ ಘಾನಾದ ರಾಷ್ಟ್ರೀಯ ಪ್ರಶಸ್ತಿ ಪ್ರದಾನ .

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.