ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಿಒಕೆಗೆ ಅಮೆರಿಕ ರಾಯಭಾರಿ ಭೇಟಿ, ಆಜಾದ್‌ ಕಾಶ್ಮೀರ ಎಂದು ಘೋಷಣೆ: ಭಾರತ ಆಕ್ಷೇಪ

Last Updated 7 ಅಕ್ಟೋಬರ್ 2022, 14:09 IST
ಅಕ್ಷರ ಗಾತ್ರ

ನವದೆಹಲಿ: ಪಾಕಿಸ್ತಾನದಲ್ಲಿರುವ ಅಮೆರಿಕ ರಾಯಭಾರಿ ಡೊನಾಲ್ಡ್‌ ಬ್ಲೋಮ್‌ ಅವರು ಪಾಕ್‌ ಆಕ್ರಮಿತ ಕಾಶ್ಮೀರಕ್ಕೆ ಇತ್ತೀಚೆಗೆ ಭೇಟಿ ನೀಡಿದ್ದನ್ನು ಭಾರತ ಶುಕ್ರವಾರ ಖಂಡಿಸಿದೆ.

‘ಭಾರತವು ಈ ವಿಷಯವನ್ನು ಅಮೆರಿಕದೊಂದಿಗೆ ಚರ್ಚಿಸಿದೆ’ ಎಂದು ಭಾರತೀಯ ವಿದೇಶಾಂಗ ಇಲಾಖೆ ವಕ್ತಾರ ಆರಿಂದಮ್ ಬಾಗ್ಚಿ ಶುಕ್ರವಾರ ಹೇಳಿದ್ದಾರೆ. ‘ಅಮೆರಿಕ ರಾಯಭಾರಿ ಪಿಒಕೆಗೆ ಭೇಟಿ ನೀಡಿರುವ ಬಗ್ಗೆ ನಮಗೆ ಅಕ್ಷೇಪಣೆಗಳಿವೆ. ಅದನ್ನು ನಾವು ಅಮೆರಿಕಕ್ಕೆ ತಿಳಿಸಿದ್ದೇವೆ’ ಎಂದು ಬಾಗ್ಚಿ ಹೇಳಿದರು.

ಇದು ಪಿಒಕೆಗೆ ಅಮೆರಿಕದ ರಾಯಭಾರಿಗಳ ಎರಡನೇ ಭೇಟಿಯಾಗಿದೆ.

ಬ್ಲೋಮ್ ಪಿಒಕೆಯನ್ನು ‘ಆಜಾದ್ ಜಮ್ಮು ಮತ್ತು ಕಾಶ್ಮೀರ’ ಎಂದೂ ಕರೆದಿದ್ದಾರೆ. ಹೀಗಾಗಿ ಭಾರತ ಇದರ ವಿರುದ್ಧ ಆಕ್ರೋಶಗೊಂಡಿದೆ.

ವಿಶ್ವವಿದ್ಯಾಲಯವೊಂದರಲ್ಲಿ ಆಯೋಜಿಸಿದ್ದ ಸಸಿ ನೆಡುವ ಕಾರ್ಯಕ್ರಮದಲ್ಲಿ ಭಾಗವಹಿಸಲು ಮತ್ತು 2005ರ ಭೂಕಂಪದಲ್ಲಿ ಮಡಿದವರ ಸ್ಮರಣಾರ್ಥ ಆಯೋಜಿಸಿದ್ದ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಭಾಗವಹಿಸಲು ಅಮೆರಿಕ ರಾಯಭಾರಿ ಸೋಮವಾರ ಪಿಒಕೆಗೆ ಭೇಟಿ ನೀಡಿದ್ದರು.

ಅವರು ಮುಜಫರಾಬಾದ್‌ನ ಹಲವು ಪ್ರಮುಖ ಸ್ಥಳಗಳಿಗೂ ಭೇಟಿ ನೀಡಿದ್ದು, ಪಿಒಕೆಯನ್ನು ‘ಆಜಾದ್ ಜಮ್ಮು ಮತ್ತು ಕಾಶ್ಮೀರ’ ಎಂದು ಕರೆದಿದ್ದಾರೆ. ಇದು ಪಾಕಿಸ್ತಾನದ ಸಂಸ್ಕೃತಿಯನ್ನು ಪ್ರತಿಬಿಂಬಿಸುತ್ತದೆ ಎಂದು ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT