ನವದೆಹಲಿ: ಸುಂಕದ ವಿಷಯವನ್ನು ಬಳಸಿಕೊಂಡು ಭಾರತ ಮತ್ತು ಪಾಕಿಸ್ತಾನದ ನಡುವಿನ ಯುದ್ಧ ನಿಲ್ಲಿಸಿದ್ದಾಗಿ ಪುನರುಚ್ಛರಿಸಿರುವ ಅಮರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಇಲ್ಲವಾದರೆ ಅದು ಪರಮಾಣು ಯುದ್ಧವಾಗಿ ಪರಿವರ್ತನೆಯಾಗುತ್ತಿತ್ತು ಎಂದಿದ್ದಾರೆ.

‘ನಾನು ಈವರೆಗೆ 8 ಯುದ್ಧಗಳನ್ನು ನಿಲ್ಲಿಸಿದ್ದೇನೆ. ಈ ಪೈಕಿ 6 ಯುದ್ಧಗಳನ್ನು ಸುಂಕದ ವಿಷಯವನ್ನು ಬಳಸಿಕೊಂಡೇ ಇತ್ಯರ್ಥಪಡಿಸಿದ್ದೇನೆ. ನೀವು ಯುದ್ಧ ನಿಲ್ಲಿಸಲು ಒಪ್ಪಿಕೊಳ್ಳದಿದ್ದರೆ, ನಾನು ನಿಮಗೆ ಸುಂಕ ಹೇರುತ್ತೇನೆ. ಜನರು ಕೊಲ್ಲಲ್ಪಡುವುದನ್ನು ನೋಡಲು ನನಗೆ ಆಗುತ್ತಿಲ್ಲ’ ಎಂದು ಟ್ರಂಪ್ ‘ಫಾಕ್ಸ್ ಬ್ಯುಸಿನೆಸ್‘ ಜೊತೆಗಿನ ಸಂದರ್ಶನದಲ್ಲಿ ಹೇಳಿದ್ದಾರೆ.

ಯುದ್ಧ ವಿರಾಮಕ್ಕೆ ಒಪ್ಪಿಕೊಳ್ಳದಿದ್ದರೆ ಏನಾಗುತ್ತದೆ ಎಂದು ಕೆಲ ದೇಶಗಳು ಕೇಳಿದ್ದವು. ನಿಮ್ಮ ಮೇಲೆ ಸುಂಕ ವಿಧಿಸಲಾಗುತ್ತದೆ ಎಂದು ಹೇಳಿದೆ. ಪರಮಾಣು ಯುದ್ಧವಾಗಿ ಪರಿವರ್ತನೆಯಾಗುತ್ತಿದ್ದ ಭಾರತ ಮತ್ತು ಪಾಕಿಸ್ತಾನದ ಯುದ್ಧವನ್ನು ನಿಲ್ಲಿಸಿದಂತೆ ಈ ಯುದ್ಧಗಳನ್ನು ನಿಲ್ಲಿಸಿದೆ. ಸುಂಕದ ವಿಷಯ ಇಲ್ಲದಿದ್ದರೆ, ಅದು ಸಾಧ್ಯವಾಗುತ್ತಿರಲಿಲ್ಲ ಎಂದಿದ್ದಾರೆ.

ಯುದ್ಧ ನಿಲ್ಲಿಸುವ ಮೂಲಕ ಟ್ರಂಪ್ 10 ಕೋಟಿ ಜನರ ಪ್ರಾಣ ಉಳಿಸಿದರು ಎಂಬ ಪಾಕಿಸ್ತಾನದ ಪ್ರಧಾನಿ ಮಾತನ್ನು ಉಲ್ಲೇಖಿಸಿರುವ ಟ್ರಂಪ್, ಅವರು ಪರಮಾಣು ಯುದ್ಧಕ್ಕೆ ಮುಂದಾಗುತ್ತಿದ್ದರು. ಸುಂಕದ ವಿಷಯ ಇಲ್ಲದೇ ಇದ್ದಿದ್ದರೆ ಯುದ್ಧ ನಿಲ್ಲಿಸಲು ಸಾಧ್ಯವಾಗುತ್ತಿರಲಿಲ್ಲ ಎಂದಿದ್ದಾರೆ.

ಭಾರತ ಮತ್ತು ಪಾಕಿಸ್ತಾನ ನಡುವಿನ ಯುದ್ಧ ನಿಲ್ಲಿಸಿದ್ದಾಗಿ ಟ್ರಂಪ್, ಕಳೆದ ವರ್ಷ ಮೇ 10ರಿಂದ 80 ಬಾರಿ ಹೇಳಿಕೊಂಡಿದ್ದಾರೆ. ಅಮೆರಿಕ ಮಧ್ಯಸ್ಥಿಕೆಯಲ್ಲಿ ನಡೆದ ಮಾತುಕತೆಯಲ್ಲಿ ಭಾರತ ಮತ್ತು ಪಾಕಿಸ್ತಾನ ತಕ್ಷಣ ಪೂರ್ಣ ಪ್ರಮಾಣದ ಯುದ್ಧ ವಿರಾಮಕ್ಕೆ ಒಪ್ಪಿಕೊಂಡಿವೆ ಎಂದು ಅವರು ಘೋಷಿಸಿದ್ದರು. ಆದರೆ, ಭಾರತ ಮಾತ್ರ ಇದರಲ್ಲಿ ಮೂರನೇ ವ್ಯಕ್ತಿಯ ಪಾತ್ರವಿಲ್ಲ ಎಂದು ನಿರಂತರವಾಗಿ ತಳ್ಳಿಹಾಕುತ್ತಲೇ ಇದೆ.

ಕಳೆದ ವರ್ಷ ಮೇ 7ರಂದು ಪಾಕಿಸ್ತಾನ ಮತ್ತು ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿರುವ ಭಯೋತ್ಪಾದಕರ ನೆಲೆಗಳನ್ನು ಗುರಿಯಾಗಿಸಿಕೊಂಡು ಭಾರತ ಆಪರೇಷನ್ ಸಿಂಧೂರ ಆರಂಭಿಸಿತ್ತು.

ಏಪ್ರಿಲ್ 22ರ ಪಹಲ್ಗಾಮ್ ದಾಳಿಯಲ್ಲಿ 26 ನಾಗರಿಕರು ಮೃತಪಟ್ಟ ಬಳಿಕ ಅದಕ್ಕೆ ಪ್ರತೀಕಾರವಾಗಿ ಭಾರತ ಈ ಕಾರ್ಯಾಚರಣೆ ನಡೆಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.