ಭಾನುವಾರ, 13 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಸಿಂಧು ನದಿ ನೀರು ಹಂಚಿಕೆ ಒಪ್ಪಂದ ಮರುಪರಿಶೀಲನೆ: ಪಾಕ್‌ಗೆ ಭಾರತ ನೋಟಿಸ್

Published : 18 ಸೆಪ್ಟೆಂಬರ್ 2024, 16:30 IST
Last Updated : 18 ಸೆಪ್ಟೆಂಬರ್ 2024, 16:30 IST
ಫಾಲೋ ಮಾಡಿ
Comments

ನವದೆಹಲಿ: ಸಿಂಧು ನದಿ ನೀರು ಹಂಚಿಕೆ ಒಪ್ಪಂದವನ್ನು ಮರುಪರಿಶೀಲನೆ ಮಾಡುವ ಕುರಿತು ಪಾಕಿಸ್ತಾನಕ್ಕೆ ಭಾರತ ನೋಟಿಸ್‌ ಕಳುಹಿಸಿದೆ.

‘ಸನ್ನಿವೇಶಗಳಲ್ಲಿ ಕೆಲ ಅನಿರೀಕ್ಷಿತ ಬದಲಾವಣೆಗಳು ಕಂಡುಬಂದ ಕಾರಣ, ಒಪ್ಪಂದವನ್ನು ಮರುಮೌಲ್ಯಮಾಪನ ಮಾಡುವ ಅಗತ್ಯವಿದೆ’ ಎಂದು ಭಾರತ ತಿಳಿಸಿದೆ.

ಒಪ್ಪಂದದ ವಿಧಿ 12(3) ಅನ್ವಯ, ಆಗಸ್ಟ್‌ 30ರಂದು ಈ ನೋಟಿಸ್‌ ಜಾರಿ ಮಾಡಲಾಗಿದೆ ಎಂದು ಕೇಂದ್ರ ಸರ್ಕಾರದ ಮೂಲಗಳು ಬುಧವಾರ ತಿಳಿಸಿವೆ.

ಒಂಬತ್ತು ವರ್ಷಗಳ ಕಾಲ ಮಾತುಕತೆಗಳ ಬಳಿಕ, 1960ರ ಸೆಪ್ಟೆಂಬರ್ 19ರಂದು ಉಭಯ ದೇಶಗಳು ಈ ಒಪ್ಪಂದಕ್ಕೆ ಸಹಿ ಹಾಕಿದ್ದವು.

ಜನಸಂಖ್ಯೆಯಲ್ಲಿ ಹೆಚ್ಚಳ, ಪರಿಸರಕ್ಕೆ ಸಂಬಂಧಿಸಿದ ಸಮಸ್ಯೆಗಳು ಹಾಗೂ ಮುಖ್ಯವಾಗಿ ಗಡಿಯಾಚೆಗಿನ ಭಯೋತ್ಪಾದನೆಯಿಂದ ಆಗುತ್ತಿರುವ ಪರಿಣಾಮಗಳಿಂದಾಗಿ ಒಪ್ಪಂದವನ್ನು ಮರುಪರಿಶೀಲನೆ ಮಾಡುವ ಅಗತ್ಯವಿದೆ ಎಂದು ಭಾರತ ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT