ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ಯಾಲೆಸ್ಟೀನ್‌ಗೆ ವಿಶ್ವಸಂಸ್ಥೆ ಸದಸ್ಯತ್ವ –ನಿರ್ಣಯಕ್ಕೆ ಅಸ್ತು

Published 10 ಮೇ 2024, 15:58 IST
Last Updated 10 ಮೇ 2024, 15:58 IST
ಅಕ್ಷರ ಗಾತ್ರ

ವಿಶ್ವಸಂಸ್ಥೆ: ವಿಶ್ವಸಂಸ್ಥೆಯ ಪೂರ್ಣಾವಧಿ ಸದಸ್ಯತ್ವ ಪಡೆಯಲು ಪ್ಯಾಲೆಸ್ಟೀನ್‌ ಅರ್ಹವಾಗಿದ್ದು, ಅದಕ್ಕೆ ಸದಸ್ಯತ್ವ ನೀಡಬೇಕು ಎಂಬ ನಿರ್ಣಯದ ಪರವಾಗಿ ಭಾರತವು ಶುಕ್ರವಾರ ಮತಚಲಾಯಿಸಿತು.

ಅಲ್ಲದೆ, ಈ ಪ್ರಸ್ತಾವವನ್ನು ‘ಸಕಾರಾತ್ಮಕ’ವಾಗಿ ಪರಿಗಣಿಸಬೇಕು ಎಂದೂ ಭದ್ರತಾ ಮಂಡಳಿಗೆ ಶಿಫಾರಸು ಮಾಡಿತು. ಈ ಕುರಿತು ಚರ್ಚಿಸಲು 193 ಸದಸ್ಯ ಬಲದ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ ತುರ್ತು ಅಧಿವೇಶನ ಇಲ್ಲಿ ನಡೆಯಿತು.

ಪ್ಯಾಲೆಸ್ಟೀನ್‌ಗೆ ಸದಸ್ಯತ್ವ ನೀಡಬೇಕು ಎಂದು ಕೋರುವ ನಿರ್ಣಯದ ಪರವಾಗಿ 143 ಮತಗಳು, ವಿರುದ್ಧವಾಗಿ 9 ಮತಗಳು ಬಿದ್ದವು. 25 ರಾಷ್ಟ್ರಗಳು ಗೈರುಹಾಜರಾಗಿದ್ದವು. ಬಳಿಕ ಸಭೆ ಕರತಾಡನ ಮೂಲಕ ಮೆಚ್ಚುಗೆ ಸೂಚಿಸಿತು.

‘ಪ್ಯಾಲೆಸ್ಟೀನ್‌ ವಿಶ್ವಸಂಸ್ಥೆಯ ಸದಸ್ಯತ್ವಕ್ಕೆ ಅರ್ಹವಾಗಿದೆ. ವಿಶ್ವಸಂಸ್ಥೆ ಸನ್ನದಿನ ವಿಧಿ 4ರ ಅನ್ವಯ ಸದಸ್ಯತ್ವಕ್ಕೆ ಮಾನ್ಯತೆ ನೀಡಬೇಕು’ ಎಂದು ನಿರ್ಣಯ ಮಂಡಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT