ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಮೆರಿಕ: ಕೋವಿಡ್‌ ಪೀಡಿತರಿಗೆ ಆಹಾರ ನೀಡಲು ನೆರವಾದ ಭಾರತೀಯ ಮೂಲದ ವೈದ್ಯರು

Last Updated 25 ಜೂನ್ 2020, 7:20 IST
ಅಕ್ಷರ ಗಾತ್ರ

ವಾಷಿಂಗ್ಟನ್‌: ಭಾರತೀಯ ಮೂಲದ ವೈದ್ಯರು, ಇಲ್ಲಿನ ಗುರುದ್ವಾರ ಹಾಗೂ ವಿವಿಧ ಸಂಘಟನೆಗಳ ಸಹಯೋಗದಲ್ಲಿ ಕೋವಿಡ್‌ನಿಂದ ಸಂಕಷ್ಟಕ್ಕೆ ಒಳಗಾದ ನಗರದ ಸುತ್ತಮುತ್ತಲಿನ ಜನರಿಗೆ ಆಹಾರ ವಿತರಿಸುವ ಕಾರ್ಯವನ್ನು ಆರಂಭಿಸಿಲಾಗಿದೆ.

ಕೋವಿಡ್‌ನಿಂದ ಸಂಕಷ್ಟಕ್ಕೆ ಸಿಲುಕಿದ್ದ 350ಕ್ಕೂ ಹೆಚ್ಚು ಕುಟುಂಬಗಳಿಗೆ ಈಗಾಗಲೇ ಆಹಾರ ವಿತರಿಸಲಾಗಿದೆ.

ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಲಕ್ಷಾಂತರ ಮಂದಿ ಉದ್ಯೋಗ ಕಳೆದುಕೊಂಡಿದ್ದು, ಭಾರತ ಮೂಲದ ಅಮೆರಿಕನ್ನರು ಒಗ್ಗೂಡಿ ಹಣ ಸಂಗ್ರಹಿಸಿ ಶಾಲೆಗಳು, ಸಮುದಾಯ ಕಾಲೇಜು, ದೇವಸ್ಥಾನ, ಗುರುದ್ವಾರದಲ್ಲಿ ಇರುವ ಸಂಕಷ್ಟಕ್ಕೆ ಒಳಗಾದವರಿಗೆ ಆಹಾರ ನೀಡುತ್ತಿದ್ದಾರೆ ಎಂದು ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಈ ಕಾರ್ಯಕ್ರಮಕ್ಕೆ ಇಂಡಿಯಾ ಡೆವಲಪ್‌ಮೆಂಟ್‌ ಆ್ಯಂಡ್‌ ರಿಲೀಫ್‌ ಫಂಡ್‌, ಯುನೈಟೆಡ್‌ ಹಿಂದೂ, ಜೈನ ಬಸದಿಗಳು, ಹಿಂದೂ ಅಮೆರಿಕನ್‌ ಸರ್ವಿಸಸ್‌ ಆ್ಯಂಡ್‌ ಅಮೆರಿಕನ್‌ ಡೈವರ್ಸಿಟಿ ಗ್ರೂಪ್‌ ಕೂಡ ಕೈ ಜೋಡಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT