ನ್ಯೂಯಾರ್ಕ್:ಕೋವಿಡ್ -19 ರೋಗ ಬಾಧಿತರಾಗಿದ್ದಭಾರತೀಯ ಮೂಲದ ಪತ್ರಕರ್ತ ಬ್ರಹ್ಮ್ ಕಾಂಚಿಬೊತ್ಲಾ ನ್ಯೂಯಾರ್ಕ್ನಲ್ಲಿ ಸಾವಿಗೀಡಾಗಿದ್ದಾರೆ.
9 ದಿನಗಳ ಕಾಲ ಆಸ್ಪತ್ರೆಯಲ್ಲಿದ್ದ ಕಾಂಚಿಬೊತ್ಲಾ ಸೋಮವಾರ ಬೆಳಗ್ಗೆ ಕೊನೆಯುಸಿರೆಳೆದಿದ್ದಾರೆ ಎಂದು ಅವರ ಪುತ್ರ ಸುಧಾಮ ಕಾಂಚಿಬೊತ್ಲಾ ಹೇಳಿದ್ದಾರೆ.66ರ ಹರೆಯದ ಕಾಂಚಿಬೊತ್ಲಾ ಯುನೈಟೆಡ್ ನ್ಯೂಸ್ ಆಫ್ ಇಂಡಿಯಾದ ಪ್ರತಿನಿಧಿಯಾಗಿದ್ದರು.
ಅಮೆರಿಕದಲ್ಲಿ28 ವರ್ಷಗಳ ವೃತ್ತಿ ಜೀವನ ನಡೆಸಿದ ಕಾಂಚಿಬೊತ್ಲಾ ವಿತ್ತ ಪತ್ರಿಕೆ ಮೆರ್ಜರ್ ಮಾರ್ಕೆಟ್ನಲ್ಲಿ11 ವರ್ಷ ಸುದ್ದಿ ಸಂಪಾದಕರಾಗಿ ಕಾರ್ಯ ನಿರ್ವಹಿಸಿದ್ದರು. ನ್ಯೂಸ್ ಇಂಡಿಯಾ- ಟೈಮ್ಸ್ ವಾರಪತ್ರಿಕೆಯಲ್ಲಿಯೂ ಅವರು ಕಾರ್ಯ ನಿರ್ವಹಿಸಿದ್ದರು.
ಭಾರತದಲ್ಲಿ ಹಲವಾರು ಪತ್ರಿಕೆಗಳಲ್ಲಿ ಕಾರ್ಯನಿರ್ವಹಿಸಿದ್ದ ಅವರು 1992ರಲ್ಲಿ ಅಮೆರಿಕಗೆ ಹೋಗಿದ್ದರು. ನ್ಯೂಯಾರ್ಕ್ನಲ್ಲಿ ನಿರ್ಬಂಧ ಇರುವುದರಿಂದ ಅಂತ್ಯ ಸಂಸ್ಕಾರ ನಡೆಸುವ ಬಗ್ಗೆ ಕುಟುಂಬ ಇನ್ನೂ ತೀರ್ಮಾನ ಕೈಗೊಂಡಿಲ್ಲ ಎಂದು ಸುಧಾಮ ಹೇಳಿದ್ದಾರೆ.