ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಂಚನೆ ಆರೋಪ: ಭಾರತೀಯನ ಬಂಧನ

Last Updated 31 ಜನವರಿ 2019, 20:00 IST
ಅಕ್ಷರ ಗಾತ್ರ

ವಾಷಿಂಗ್ಟನ್: ಭಾರತೀಯ ಮೂಲದ400ಕ್ಕೂ ಹೆಚ್ಚು ಜನರ ಬಳಿ 8 ಲಕ್ಷ ಡಾಲರ್‌ ವಂಚಿಸಿದ (ಸುಮಾರು ₹5.76 ಕೋಟಿ) ಆರೋಪದಡಿ ಭಾರತೀಯನೊಬ್ಬನನ್ನು ಬಂಧಿಸಲಾಗಿದೆ.

ತಾತ್ಕಾಲಿಕ ಸಾಲ ಯೋಜನೆ ನೆಪದಲ್ಲಿ ಜನರಿಗೆ ವಂಚಿಸಿದ ಅರೋಪದಡಿ ಜನವರಿ 25ರಂದು ಕಿಶೋರ್ ಬಾಬು ಅಮ್ಮಿ ಶೆಟ್ಟಿಯನ್ನು ಬಂಧಿಸಲಾಗಿದೆ.ಕಿಶೋರ್‌ ಬಾಬು,2013ರಲ್ಲಿ ವಿದ್ಯಾರ್ಥಿ ವೀಸಾದಡಿ ಅಮೆರಿಕಕ್ಕೆ ತೆರಳಿದ್ದ. ಆದರೆ, 2014ರಲ್ಲಿ ಅವನ ವೀಸಾ ರದ್ದಾಗಿತ್ತು.

ಎನ್‌ಪಿಟಿಗೆ ಸಹಿ ಹಾಕಿ: ಚೀನಾ
ಬೀಜಿಂಗ್‌ (ಪಿಟಿಐ):ಪರಮಾಣು ಪೂರೈಕೆದಾರರ ಒಕ್ಕೂಟಕ್ಕೆ (ಎನ್‌ಎಸ್‌ಜಿ) ಸೇರಬೇಕೆಂದರೆ, ಭಾರತವು ಕಡ್ಡಾಯವಾಗಿ ಅಣ್ವಸ್ತ್ರ ಪ್ರಸರಣ ತಡೆ ಒಪ್ಪಂದಕ್ಕೆ (ಎನ್‌ಪಿಟಿ) ಸಹಿ ಹಾಕಬೇಕು ಎಂದು ಚೀನಾ ಗುರುವಾರ ಹೇಳಿದೆ.ಭಾರತವು ಎನ್‌ಎಸ್‌ಜಿಗೆ ಸೇರುವುದನ್ನು ಚೀನಾ ಮೊದಲಿನಿಂದಲೂ ವಿರೋಧಿಸುತ್ತಿದೆ.

ಮಲೇಷ್ಯಾ: ನೂತನ ದೊರೆ ಪಟ್ಟಾಭಿಷೇಕ
ಕ್ವಾಲಾಲಂಪುರ (ಎಎಫ್‌ಪಿ):ರಾಜ ಐದನೇ ಸುಲ್ತಾನ್‌ ಮುಹಮ್ಮದ್‌ ಪದಚ್ಯುತಿಯ ನಂತರ, ಮಲೇಷ್ಯಾ ನೂತನ ರಾಜನನ್ನು ಆಯ್ಕೆ ಮಾಡಿಕೊಂಡಿದೆ. ದೇಶದ ನೂತನ ಅರಸ ಸುಲ್ತಾನ್‌ ಅಬ್ದುಲ್ಲಾ ಸುಲ್ತಾನ್‌ ಅಹ್ಮದ್‌ ಶಾ ಅವರ ಪಟ್ಟಾಭಿಷೇಕ ಗುರುವಾರ ನೆರವೇರಿತು.

‘ಹುರಿಯತ್‌ ಜತೆ ಮಾತುಕತೆ ಹೊಸತಲ್ಲ’
ಇಸ್ಲಾಮಾಬಾದ್‌ (ಪಿಟಿಐ): ಹುರಿಯತ್‌ ಕಾನ್ಫರೆನ್ಸ್‌ ನಾಯಕರ ಜತೆ ವಿದೇಶಾಂಗ ಸಚಿವ ಷಾ ಮಹಮ್ಮದ್‌ ಖುರೇಷಿ ಮಾತುಕತೆ ನಡೆಸಿರುವುದಕ್ಕೆ ಭಾರತ ವ್ಯಕ್ತಪಡಿಸಿರುವ ಆಕ್ಷೇಪಗಳನ್ನು ಪಾಕಿಸ್ತಾನ ತಿರಸ್ಕರಿಸಿದೆ. ಕಾಶ್ಮೀರಿ ನಾಯಕರ ಜತೆ ಸಮಾಲೋಚನೆ ಹೊಸ ವಿಷಯವಲ್ಲ ಎಂದು ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT