ಸಾಂಟಿಗಾವೊ (ಚಿಲಿ): ಕಡಿಮೆ ಸಮಯದಲ್ಲಿ 10 ಸಾವಿರ ಕಿ.ಮೀ. ಪ್ರಯಾಣಿಸುವ ಮೂಲಕ ವಿಶ್ವ ದಾಖಲೆ ಮುರಿಯಲು ಯತ್ನಿಸುತ್ತಿದ್ದ ಭಾರತೀಯ ಸೈಕ್ಲಿಸ್ಟ್ವೊಬ್ಬರು ಚಿಲಿಯಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ.

36 ವರ್ಷದ ಮೋಹಿತ್ ಕೊಹ್ಲಿ ಮೃತ ಸೈಕ್ಲಿಸ್ಟ್. ‘ಪೋಜೊ ಅಲ್ಮೊಂಟೆ ಎಂಬಲ್ಲಿ ಸಾಗುತ್ತಿದ್ದ ವೇಳೆ, ಮಿನಿ ಬಸ್ವೊಂದು ಮೋಹಿತ್ ಮೇಲೆ ಹರಿದಿದ್ದು, ಅವರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ’ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

ಮೋಹಿತ್, ಜ.22ರಂದು ತಮ್ಮ ಸಾಹಸ ಪಯಣ ಆರಂಭಿಸಿದ್ದರು. ಆಸ್ಟ್ರಿಯಾ ಸೈಕ್ಲಿಸ್ಟ್ ಮೈಕೆಲ್ ಸ್ಟ್ರಾಸರ್ 2018ರಲ್ಲಿ 41 ದಿನ 41 ನಿಮಿಷಗಳಲ್ಲಿ ದಕ್ಷಿಣ ಅಮೆರಿಕದಾದ್ಯಂತ ಪ್ರವಾಸ ಮಾಡಿದ್ದರು ಎಂದು ಗಿನ್ನಿಸ್ ವರ್ಲ್ಡ್ ರೆಕಾರ್ಡ್ನ ವೆಬ್ಸೈಟ್ನಲ್ಲಿ ಮಾಹಿತಿ ಇದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.