ಸೋಮವಾರ, 24 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ವೀಸಾ ಕೊಡಿಸಲು ವಂಚನೆ: ಕೆನಡಾದಲ್ಲಿ ಭಾರತ ಮೂಲದ ವ್ಯಕ್ತಿಗೆ ಶಿಕ್ಷೆ

Published 30 ಮೇ 2024, 13:34 IST
Last Updated 30 ಮೇ 2024, 13:34 IST
ಅಕ್ಷರ ಗಾತ್ರ

ಒಟ್ಟಾವ: ಕೆನಡಾದ ವೀಸಾ ದೊರಕುವಂತೆ ಮಾಡಲು ವಿದ್ಯಾರ್ಥಿಗಳಿಗೆ ಕಾಲೇಜು ದಾಖಲಾತಿಯ ನಕಲಿ ಪತ್ರಗಳನ್ನು ಒದಗಿಸಿದ ವಂಚನೆ ಪ್ರಕರಣದಲ್ಲಿ ಭಾರತ ಮೂಲದ ವ್ಯಕ್ತಿಗೆ ವ್ಯಾಂಕೋವರ್‌ ನ್ಯಾಯಾಲಯವೊಂದು ಮೂರು ವರ್ಷಗಳ ಶಿಕ್ಷೆ ವಿಧಿಸಿದೆ. 

ಬ್ರಿಜೇಶ್ ಮಿಶ್ರಾ (37) ಶಿಕ್ಷೆಗೆ ಗುರಿಯಾದವನು. ಕೆನಡಾದ ಗಡಿ ಸೇವೆಗಳ ಸಂಸ್ಥೆಯವರು (ಸಿಬಿಎಸ್‌ಎ) ಪ್ರಕರಣದ ತನಿಖೆ ನಡೆಸಿದಾಗ, ಸರಣಿ ವಂಚನೆ ಪ್ರಕರಣಗಳು ಬಯಲಾಗಿದ್ದವು. 

ಬುಧವಾರ ನ್ಯಾಯಾಲಯದಲ್ಲಿ ವಿಚಾರಣೆಗೆ ಹಾಜರಾದ ಬ್ರಿಜೇಶ್, ತಪ್ಪೊಪ್ಪಿಕೊಂಡ. ಇನ್ನು ಮುಂದೆ ಅಂತಹ ಕೃತ್ಯ ಎಸಗುವುದಿಲ್ಲ ಎಂದು ಹೇಳಿದ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT