ಶುಕ್ರವಾರ, 29 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೇಪಾಳದಲ್ಲಿ ಮಕ್ಕಳ ಅಪಹರಣ: ಭಾರತೀಯ ಯುವಕನ ಬಂಧನ

Published 21 ಆಗಸ್ಟ್ 2023, 13:09 IST
Last Updated 21 ಆಗಸ್ಟ್ 2023, 13:09 IST
ಅಕ್ಷರ ಗಾತ್ರ

ಕಠ್ಮಂಡು: ದಕ್ಷಿಣ ನೇಪಾಳದ ಬಾರಾ ಜಿಲ್ಲೆಯಲ್ಲಿ ಇಬ್ಬರು ಮಕ್ಕಳನ್ನು ಅಪಹರಿಸಿ ಗೋಣಿಚೀಲದಲ್ಲಿ ಭಾರತಕ್ಕೆ ಸಾಗಿಸಲು ಯತ್ನಿಸಿದ ಆರೋಪದ ಮೇಲೆ 22 ವರ್ಷದ ಭಾರತೀಯ ಯುವಕನನ್ನು ಬಂಧಿಸಲಾಗಿದೆ ಎಂದು ಸೋಮವಾರ ಪೊಲೀಸರು ತಿಳಿಸಿದ್ದಾರೆ.

ಬಿಹಾರದ ನಿವಾಸಿ ತಬ್ರೇಜ್‌ ಆಲಂ ಎಂಬಾತ, ನೇಪಾಳ–ಭಾರತ ಗಡಿಯಲ್ಲಿರುವ ಬಾರಾ ಜಿಲ್ಲೆಯ ಅಮ್ವಾ ಗ್ರಾಮದಿಂದ ಒಂಬತ್ತು ತಿಂಗಳ ಹೆಣ್ಣು ಮಗು ಮತ್ತು ಎರಡು ವರ್ಷದ ಗಂಡು ಮಗುವನ್ನು ಗೋಣಿಚೀಲದಲ್ಲಿ ತುಂಬಿಕೊಂಡು ಹೋಗುತ್ತಿದ್ದ ವೇಳೆ ಭಾನುವಾರ ಬಂಧಿಸಲಾಗಿದೆ ಎಂದು ಸಶಸ್ತ್ರ ಪೊಲೀಸ್ ಪಡೆಯ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ರಾಜೇಂದ್ರ ಖಡ್ಕಾ ತಿಳಿಸಿದ್ದಾರೆ.

ಗೋಣಿಚೀಲದ ಒಳಗಿಂದ ಮಕ್ಕಳು ಅಳುತ್ತಿದ್ದದ್ದನ್ನು ಕೇಳಿಸಿಕೊಂಡ ನಂತರ ಅರೆಸೇನಾಪಡೆಯ ತಂಡವು ಆಲಂನನ್ನು ಬಂಧಿಸಿತು. ಮಕ್ಕಳನ್ನು ರಕ್ಷಿಸಿ, ಅವರನ್ನು ಕುಟುಂಬದವರಿಗೆ ಹಸ್ತಾಂತರಿಸಲಾಗಿದೆ ಎಂದು ಖಡ್ಕಾ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT