ಸಿಂಗಪುರ : ಭಾರತೀಯ ನೌಕಾಪಡೆಯ ಮುಖ್ಯಸ್ಥ ಅಡ್ಮಿರಲ್ ಆರ್.ಹರಿಕುಮಾರ್ ಅವರು ಬುಧವಾರ ಸಿಂಗಪುರ ರಕ್ಷಣಾ ಸಚಿವ ಡಾ.ಎನ್‌ಜಿ ಇಂಗ್ ಹೆನ್ ಅವರನ್ನು ಭೇಟಿ ಮಾಡಿ, ಉಭಯ ದೇಶಗಳ ನಡುವಣ ಸುದೀರ್ಘ ದ್ವಿಪಕ್ಷೀಯ ರಕ್ಷಣಾ ಸಂಬಂಧವನ್ನು ಮೆಲುಕು ಹಾಕಿದರು.
ಇದೇ ವೇಳೆ, ಪ್ರಾದೇಶಿಕ ಭದ್ರತೆ ಕುರಿತ ಬೆಳವಣಿಗೆಗಳು ಮತ್ತು ಆತ್ಮವಿಶ್ವಾಸ ಹೆಚ್ಚಿಸುವ ಬಹುಪಕ್ಷೀಯ ವೇದಿಕೆಗಳನ್ನು ಬಳಸಿಕೊಳ್ಳುವ ಮಹತ್ವದ ಕುರಿತು ಚರ್ಚಿಸಿದರು ಎಂದು ಸಿಂಗಪುರ ರಕ್ಷಣಾ ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.
ಹರಿ ಅವರು ಮೇ 1ರಿಂದ ಸಿಂಗಪುರ ಪ್ರವಾಸ ಆರಂಭಿಸಿದ್ದು ಮೇ 4ರವರೆಗೆ ಇಲ್ಲಿ ಇರಲಿದ್ದಾರೆ. ಗುರುವಾರ ಅಂತರರಾಷ್ಟ್ರೀಯ ಕರಾವಳಿ ಭದ್ರತಾ ಸಮಾವೇಶದ 8ನೇ ಆವೃತ್ತಿಯಲ್ಲಿ ಕುಮಾರ್ ಭಾಗಿಯಾಗಲಿದ್ದಾರೆ.