ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಅರ್ಧ ಟನ್ ಕೊಕೇನ್ ರಫ್ತು: ಲಂಡನ್‌ನಲ್ಲಿ ಭಾರತ ಮೂಲದ ದಂಪತಿಗೆ 33 ವರ್ಷ ಜೈಲು

Published 31 ಜನವರಿ 2024, 2:38 IST
Last Updated 31 ಜನವರಿ 2024, 2:38 IST
ಅಕ್ಷರ ಗಾತ್ರ

ಲಂಡನ್: ಗುಜರಾತ್‌ನಲ್ಲಿ ಮಗನ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾರತ ಸರ್ಕಾರವು ಹಸ್ತಾಂತರ ಕೋರಿರುವ ಭಾರತ ಮೂಲದ ದಂಪತಿಗೆ ಬ್ರಿಟನ್‌ನಲ್ಲಿ ಅರ್ಧ ಟನ್‌ಗೂ ಹೆಚ್ಚು ಕೊಕೇನ್ ಅನ್ನು ಆಸ್ಟ್ರೇಲಿಯಾಗೆ ರಫ್ತು ಮಾಡಿದ ಆರೋಪದಡಿ 3 ವರ್ಷಗಳ ಜೈಲು ಶಿಕ್ಷೆಯಾಗಿದೆ.

ಶಿಕ್ಷೆಗೀಡಾದ ದಂಪತಿಯನ್ನು ಈಲಿಂಗ್‌ನ ಹಾನ್‌ವೆಲ್ ಮೂಲದ ಆರತಿ ಧೀರ್(59), ಕವಲ್‌ಜೀತ್ ಸಿನ್ಹಾ(35) ಎಂದು ಬ್ರಿಟನ್‌ನ ರಾಷ್ಟ್ರೀಯ ಅಪರಾಧ ದಳ(ಎನ್‌ಸಿಎ) ಗುರುತಿಸಿದೆ.

ಮೇ 2021ರಲ್ಲಿ ಸಿಡ್ನಿಯಲ್ಲಿ 57 ಮಿಲಿಯನ್ ಪೌಂಡ್ ಕೊಕೇನ್ ಅನ್ನು ಆಸ್ಟ್ರೇಲಿಯಾ ಬಾರ್ಡರ್ ಫೋರ್ಸ್ ವಶಪಡಿಸಿಕೊಂಡಾಗ ಪ್ರಕರಣ ಬೆಳಕಿಗೆ ಬಂದಿತ್ತು.

ಡ್ರಗ್ಸ್ ಸರಬರಾಜು ಮಾಡಿದ ಕಂಪನಿ ಈ ದಂಪತಿಗೆ ಸೇರಿದ್ದಾಗಿದ್ದು, ಲೋಹದ ಟೂಲ್‌ಬಾಕ್ಸ್‌ಗಳ ಜೊತೆ ಮಾದಕ ದ್ರವ್ಯವನ್ನು ಇಟ್ಟು ವಿಮಾನದ ಮೂಲಕ ರಫ್ತು ಮಾಡಿದ್ದರು ಎಂದು ತನಿಖೆಯಲ್ಲಿ ತಿಳಿದು ಬಂದಿದೆ.

ಪ್ರಕರಣದಲ್ಲಿ ಕೆಲಸ ನಿರ್ವಹಿಸಿದ ಮೂವರು ಎನ್‌ಸಿಎ ಅಧಿಕಾರಿಗಳಿಗೆ ಬಹುಮಾನವನ್ನು ನ್ಯಾಯಾಧೀಶರು ಘೋಷಿಸಿದ್ಧಾರೆ.

ಆಸ್ಟ್ರೇಲಿಯಾಗೆ ಕೊಕೇನ್ ರಫ್ತು ಮತ್ತು ಹಣ ಅಕ್ರಮ ವರ್ಗಾವಣೆ ಆರೋಪವನ್ನು ದಂಪತಿ ತಳ್ಳಿ ಹಾಕಿದ್ದಾರೆ.

ವಾಣಿಜ್ಯ ವಿಮಾನದ ಮೂಲಕ ದಂಪತಿ 6 ಲೋಹದ ಟೂಲ್ ಬಾಕ್ಸ್‌ಗಳಲ್ಲಿ ಕೊಕೇನ್ ರಫ್ತು ಮಾಡಿದ್ದರು. ಪರಿಶೀಲನೆ ವೇಳೆ 514 ಕೆ.ಜಿ ಕೊಕೇನ್ ಸಿಕ್ಕಿತ್ತು ಎಂದು ವರದಿ ತಿಳಿಸಿದೆ.

ಆಸ್ಟ್ರೇಲಿಯಾದಲ್ಲಿ ಈ ಡ್ರಗ್ಸ್ ಮಾರಾಟ ಮಾಡಿದರೆ 57 ಮಿಲಿಯನ್ ಪೌಂಡ್ ಸಿಗಲಿದೆ. ಅಂದರೆ, ಒಂದು ಕೆ.ಜಿ ಕೊಕೇನ್ ಬೆಲೆ ಬ್ರಿಟನ್‌ನಲ್ಲಿ 26,000 ಪೌಂಡ್ ಆಗಿದ್ದು, ಆಸ್ಟ್ರೇಲಿಯಾ ಒಂದು ಕೆ.ಜಿ ಕೊಕೇನ್‌ಗೆ ಸಗಟು ಮಾರುಕಟ್ಟೆಯಲ್ಲಿ 110,000 ಪೌಂಡ್ ಬೆಲೆ ಇದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT