ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಮಾನದಲ್ಲಿ ಬಾಲಕಿ ಪಕ್ಕ ಕುಳಿತು ಹಸ್ತಮೈಥುನ: ಭಾರತ ಮೂಲದ ವೈದ್ಯ ಸೆರೆ

Published 12 ಆಗಸ್ಟ್ 2023, 16:01 IST
Last Updated 12 ಆಗಸ್ಟ್ 2023, 16:01 IST
ಅಕ್ಷರ ಗಾತ್ರ

ನ್ಯೂಯಾರ್ಕ್‌: ವಿಮಾನದಲ್ಲಿ ಬಾಲಕಿಯ ಪಕ್ಕ ಕುಳಿತು ಹಸ್ತಮೈಥುನ ಮಾಡಿಕೊಂಡ ಆರೋಪದ ಮೇಲೆ 33 ವರ್ಷದ ಭಾರತ ಮೂಲದ ವೈದ್ಯರೊಬ್ಬರನ್ನು ಅಮೆರಿಕದಲ್ಲಿ ಬಂಧಿಸಲಾಗಿದ್ದು, ಅವರ ವಿರುದ್ಧ ಚಾರ್ಜ್‌ ಶೀಟ್‌ ಸಲ್ಲಿಸಲಾಗಿದೆ.

ಡಾ ಸುದೀಪ್ತ ಮೊಹಾಂತಿ ಅವರನ್ನು ಗುರುವಾರ ಬಂಧಿಸಲಾಗಿದೆ. ಅಸಭ್ಯ ಮತ್ತು ಅನುಚಿತ ವರ್ತನೆಗೆ ಸಂಬಂಧಿಸಿದ ಕ್ರಿಮಿನಲ್ ದೂರಿನ ಆಧಾರದ ಮೇಲೆ ಅಮೆರಿಕದ ವಿಶೇಷ ನ್ಯಾಯಾಲಯದಲ್ಲಿ ಆರೋಪ ಪಟ್ಟಿ ಸಲ್ಲಿಸಲಾಗಿದೆ.  ಹಲವು ಷರತ್ತುಗಳನ್ನು ವಿಧಿಸಿ ವೈದ್ಯ ಮೊಹಾಂತಿಯವರನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಲಾಯಿತು. 

ಕಳೆದ ವರ್ಷ ಮೇ ತಿಂಗಳಲ್ಲಿ ಹೊನಲುಲುನಿಂದ ಬೋಸ್ಟನ್‌ಗೆ ವಿಮಾನದಲ್ಲಿ ತೆರಳುತ್ತಿದ್ದ ಮೊಹಾಂತಿ, 14 ವರ್ಷದ ಬಾಲಕಿಯೊಬ್ಬರ ಪಕ್ಕದಲ್ಲಿ ಕುಳಿತಿದ್ದರು. ಪ್ರಯಾಣದ ವೇಳೆ, ಮೊಹಾಂತಿ ಹಸ್ತಮೈಥುನ ಮಾಡಿಕೊಂಡಿದ್ದನ್ನು ಗಮನಿಸಿದ್ದ ಬಾಲಕಿ ನಂತರ ಬೇರೆ ಆಸನದಲ್ಲಿ ಹೋಗಿ ಕುಳಿತರು. ವಿಮಾನದಿಂದ ಇಳಿದ ಕೂಡಲೇ, ಈ ವಿಷಯವನ್ನು ತಮ್ಮ ಕುಟುಂಬಸ್ಥರು ಮತ್ತು ವಿಮಾನದ ಸಿಬ್ಬಂದಿ ಗಮನಕ್ಕೆ ತಂದಿದ್ದರು. ಈ ಕುರಿತು ಮೊಹಾಂತಿ ವಿರುದ್ಧ ಪ್ರಕರಣ ದಾಖಲಾಗಿತ್ತು.  ಆರೋಪ ಸಾಬೀತಾದರೆ 90 ದಿನಗಳ ಜೈಲು ಶಿಕ್ಷೆ ಮತ್ತು 5,000 ಡಾಲರ್‌ (₹4.14 ಲಕ್ಷ) ದಂಡ ತೆರಬೇಕಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT