ಶುಕ್ರವಾರ, 24 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶ್ರೀಲಂಕಾದ ವಿಮಾನ ನಿಲ್ದಾಣ ನಿರ್ವಹಣೆ ಭಾರತ, ರಷ್ಯಾ ಸಂಸ್ಥೆಗಳಿಗೆ

Published 26 ಏಪ್ರಿಲ್ 2024, 15:11 IST
Last Updated 26 ಏಪ್ರಿಲ್ 2024, 15:11 IST
ಅಕ್ಷರ ಗಾತ್ರ

ಕೊಲಂಬೊ: ಶ್ರೀಲಂಕಾದ ಹಂಬನ್‌ತೋಟಾದಲ್ಲಿರುವ ಮಟ್ಟಲಾ ರಾಜಪಕ್ಸ ಅಂತರರಾಷ್ಟ್ರೀಯ ನಿಲ್ದಾಣದ ನಿರ್ವಹಣೆಯನ್ನು ಭಾರತ ಮತ್ತು ರಷ್ಯಾದ ಮೂಲದ ಕಂಪನಿಗಳಿಗೆ ವಹಿಸಲಾಗಿದೆ.

ಈ ವಿಮಾನ ನಿಲ್ದಾಣದ 30 ವರ್ಷಗಳ ನಿರ್ವಹಣೆಗೆ ಒಟ್ಟಾರೆ ಐದು ಪ್ರಸ್ತಾವಗಳು ಬಂದಿದ್ದವು. ಆದರೆ, ಸಂಪುಟ ನೇಮಿಸಿದ ಸಲಹಾ ಸಮಿತಿಯು ವಿಮಾನ ನಿಲ್ದಾಣದ ನಿರ್ವಹಣೆಯನ್ನು ಭಾರತ ಮೂಲದ ಶೌರ್ಯ ಏರೋನಾಟಿಕ್ಸ್ (ಪಿವಿಟಿ) ಲಿ ಆಫ್ ಇಂಡಿಯಾ ಮತ್ತು ರಷ್ಯಾದ ಏರ್‌ಪೋರ್ಟ್ಸ್ ಆಫ್ ರಿಜಿಯನ್ಸ್ ಮ್ಯಾನೇಜ್‌ಮೆಂಟ್ ಕಂಪನಿ ಆಫ್ ರಷ್ಯಾಗೆ ವಹಿಸಲು ನಿರ್ಧರಿಸಿತು ಎಂದು ಸರ್ಕಾರದ ವಕ್ತಾರರೊಬ್ಬರು ಶುಕ್ರವಾರ ಹೇಳಿದ್ದಾರೆ. 

₹1,742 ಕೋಟಿ ವೆಚ್ಚದಲ್ಲಿ ಅತ್ಯಾಧುನಿಕ ಸೌಲಭ್ಯಗಳನ್ನು ಒಳಗೊಂಡ ಈ ವಿಮಾನ ನಿಲ್ದಾಣ ನಿರ್ಮಿಸಲಾಗಿದ್ದು, ಈ ಪೈಕಿ ₹1,583 ಚೀನಾ ಮೂಲದ ಎಕ್ಸಿಂ ಬ್ಯಾಂಕ್ ಆಫ್ ಚೀನಾದಿಂದ ಭಾರಿ ಮೊತ್ತದ ಬಡ್ಡಿಯ ಸಾಲದ ರೂಪದಲ್ಲಿ ಹರಿದುಬಂದಿತ್ತು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT