ಬುಧವಾರ, 18 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಬಾಂಗ್ಲಾ: ತುರ್ತು ಕೆಲಸಕ್ಕೆ ಭಾರತೀಯ ವೀಸಾ

Published : 2 ಸೆಪ್ಟೆಂಬರ್ 2024, 11:37 IST
Last Updated : 2 ಸೆಪ್ಟೆಂಬರ್ 2024, 11:37 IST
ಫಾಲೋ ಮಾಡಿ
Comments

ಢಾಕಾ: ಅಗತ್ಯವಿರುವವರಿಗೆ ತುರ್ತು ವೈದ್ಯಕೀಯ ಹಾಗೂ ವಿದ್ಯಾರ್ಥಿ ವೀಸಾಗಳನ್ನು ಸೀಮಿತ ಸಂಖ್ಯೆಯಲ್ಲಿ ವಿತರಿಸಲು  ಬಾಂಗ್ಲಾದ ಪ್ರಮುಖ ನಗರಗಳಲ್ಲಿರುವ ಭಾರತೀಯ ವೀಸಾ ಅರ್ಜಿ ಕೇಂದ್ರಗಳು ಆರಂಭಿಸಿವೆ.

ಢಾಕಾ, ಚಟ್ಟೋಗ್ರಾಮ, ರಾಜಶಾಹಿ, ಸಿಲ್ಹೆಟ್‌ ಮತ್ತು ಖುಲ್ನಾದಲ್ಲಿ ಈ ಸೇವೆ ಆರಂಭವಾಗಿದೆ.

‘ಬಾಂಗ್ಲಾದ ವಿದ್ಯಾರ್ಥಿಗಳು ಹಾಗೂ ಕಾರ್ಮಿಕರು ವಿದೇಶಕ್ಕೆ ಪ್ರಯಾಣಿಸಲೇಬೇಕಾದಂತಹ ತುರ್ತು ಸಂದರ್ಭಗಳಲ್ಲಿ ಸೀಮಿತ ಸಂಖ್ಯೆಯಲ್ಲಿನ ವೀಸಾಗಳನ್ನು ಹೆಚ್ಚುವರಿಯಾಗಿ ಈ ಐದು ಕೇಂದ್ರಗಳು ಒದಗಿಸಲಿವೆ. ಇದಕ್ಕಾಗಿಯೇ ಭಾರತದ ರಾಯಭಾರ ಕಚೇರಿಯಿಂದ ವೀಸಾ ವಿತರಿಸುವ ಅನುಮತಿಯನ್ನು ಪಡೆಯಲಾಗಿದೆ’ ಎಂದು ಬಾಂಗ್ಲಾದೇಶದಲ್ಲಿರುವ ಭಾರತೀಯ ವೀಸಾ ಅರ್ಜಿ ಕೇಂದ್ರ (ಐವಿಎಸಿ) ಹೇಳಿಕೆಯಲ್ಲಿ ತಿಳಿಸಿದೆ.

‘ಐವಿಎಸಿ ತನ್ನ ಸಾಮಾನ್ಯ ಕಾರ್ಯಾಚರಣೆಗಳನ್ನು ಪುನರಾರಂಭಿಸುವವರೆಗೆ ಈ ಸೇವೆಗಳು ಸೀಮಿತವಾಗಿರಲಿವೆ’ ಎಂದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT