ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೌದಿಯಿಂದ ತೈಲ;ರಷ್ಯಾದಿಂದ ಕ್ಷಿಪಣಿ ಖರೀದಿಸುವ ಭಾರತದ ಯೋಜನೆ ನಿಷ್ಪ್ರಯೋಜಕ: ಯುಎಸ್

Last Updated 12 ಅಕ್ಟೋಬರ್ 2018, 11:45 IST
ಅಕ್ಷರ ಗಾತ್ರ

ವಾಷಿಂಗ್ಟನ್‌: ಇರಾನ್‌ನಿಂದ ತೈಲ ಹಾಗೂ ರಷ್ಯಾದಿಂದಎಸ್‌–400 ಟ್ರಯಂಫ್ ಕ್ಷಿಪಣಿ ವ್ಯವಸ್ಥೆ ಖರೀದಿಸಲು ಭಾರತ ನಿರ್ಧರಿಸಿರುವುದು ‘ನಿಷ್ಪ್ರಯೋಜಕ’ ಮತ್ತು ಇದನ್ನು ಅಮೆರಿಕ ಅತ್ಯಂತ ಗಂಭೀರವಾಗಿ ಅವಲೋಕನ ನಡೆಸುತ್ತಿದೆ ಎಂದು ಅಮೆರಿಕ ರಾಜ್ಯ ಇಲಾಖೆ ತಿಳಿಸಿದೆ.

2015ರಲ್ಲಿ ಇರಾನ್‌ ಜತೆಗೆ ಮಾಡಿಕೊಂಡಿದ್ದ ನಾಗರಿಕ ಪರಮಾಣು ಒಪ್ಪಂದವನ್ನು ಮೇ ತಿಂಗಳಲ್ಲಿ ರದ್ದುಪಡಿಸಿರುವ ಅಮೆರಿಕ, ನವೆಂಬರ್‌ 4ರ ನಂತರ ಇರಾನ್‌ನ ತೈಲ ಕ್ಷೇತ್ರದ ಮೇಲೆ ಸಂಪೂರ್ಣ ನಿರ್ಬಂಧ ಹೇರಲು ನಿರ್ಧರಿಸಿದೆ.

ನವೆಂಬರ್‌ 4ರ ನಂತರವೂ ಭಾರತ ಇರಾನ್‌ನಿಂದ ತೈಲ ಖರೀದಿ ಮುಂದುವರಿಸಲಿರುವ ಬಗ್ಗೆ ಕೇಳಲಾದ ಪ್ರಶ್ನೆಯೊಂದಕ್ಕೆ ಉತ್ತರಿಸಿದಸಾರ್ವಜನಿಕ ಆಡಳಿತ ಇಲಾಖೆಯ ರಾಜ್ಯ ಖಾತೆ ವಕ್ತಾರೆ ಹೀಥರ್‌ ನೌರ್ಟ್‌, ಇದು ‘ಪ್ರಯೋಜನರಹಿತ’ ಎಂದಿದ್ದಾರೆ.

‘ನವೆಂಬರ್‌ನಲ್ಲಿ ಇರಾನ್‌ನಿಂದ ತೈಲ ಖರೀದಿಸಲಾಗುವುದು. ಇದಕ್ಕಾಗಿ ಎರಡು ಕಂಪನಿಗಳು ಈಗಾಗಲೇ ಪ್ರಸ್ತಾವ ಸಲ್ಲಿಸಿವೆ’ ಎಂದು ಪೆಟ್ರೋಲಿಯಂ ಸಚಿವ ಧರ್ಮೇಂದ್ರ ಪ್ರಧಾನ್‌ ಇತ್ತೀಚೆಗೆ ಹೇಳಿದ್ದರು.

ಆದರೆ ಇರಾನ್‌ನಿಂದ ಪೆಟ್ರೋಲ್‌ ಖರೀದಿಸುವ ಪಾಲುದಾರ ರಾಷ್ಟ್ರಗಳಿಗೆ ಗುರುವಾರವೂ ಎಚ್ಚರಿಕೆ ಸಂದೇಶ ರವಾನಿಸಿದ್ದನೌರ್ಟ್‌, ‘ನವೆಂಬರ್‌ 04ರ ಬಳಿಕವೂ ತೈಲ ಖರೀದಿ ಮುಂದುವರಿಸಿದರೆ ಪರಿಣಾಮ ಎದುರಿಸಬೇಕಾದೀತು. ಈಗಾಗಲೇ ಇರಾನ್‌ನಿಂದ ತೈಲ ಖರೀದಿಸುವ ಪಾಲುದಾರ ರಾಷ್ಟ್ರಗಳೊಂದಿಗೆ ಮಾತುಕತೆ ನಡೆಸಲಾಗಿದೆ’ ಎಂದಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT