ಮಂಗಳವಾರ, 27 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆನಡಾ ದೇಗುಲದಲ್ಲಿ ಕಳ್ಳತನ: ಭಾರತೀಯ ಮೂಲದ ವ್ಯಕ್ತಿ ಬಂಧನ

Published 29 ಡಿಸೆಂಬರ್ 2023, 13:47 IST
Last Updated 29 ಡಿಸೆಂಬರ್ 2023, 13:47 IST
ಅಕ್ಷರ ಗಾತ್ರ

ಟೊರೊಂಟೊ: ಕೆನಡಾದ ವಿವಿಧೆಡೆ ಹಿಂದೂ ದೇಗುಲಗಳಲ್ಲಿ ಕಳ್ಳತನ ಮಾಡಿದ ಪ್ರಕರಣದಲ್ಲಿ ಭಾರತೀಯ ಮೂಲದ ವ್ಯಕ್ತಿಯೊಬ್ಬರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಬಂಧಿತ ವ್ಯಕ್ತಿಯನ್ನು ಜಗದೀಶ್‌ ಪಂಢೇರ್ (41) ಎಂದು ಗುರುತಿಸಲಾಗಿದೆ.

‘ಇದು ದ್ವೇಷದಿಂದ ಮಾಡಿದ ಕೃತ್ಯಗಳಂತೆ ಕಾಣಿಸುತ್ತಿಲ್ಲ’ ಎಂದು ಪೊಲೀಸರು ತಿಳಿಸಿದ್ದಾರೆ.

‘ಪಂಢೇರ್, ದೇಗುಲಗಳ ಬಾಗಿಲುಗಳನ್ನು ಒಡೆದು ಒಳನುಗ್ಗಿ, ಕಾಣಿಕೆ ಡಬ್ಬಗಳಿಂದ ಅಪಾರ ಪ್ರಮಾಣದ ನಗದನ್ನು ಹೊತ್ತೊಯ್ದಿರುವುದು ಸಿ.ಸಿ.ಟಿ.ವಿ ಕ್ಯಾಮೆರಾಗಳಲ್ಲಿ ಸೆರೆಯಾಗಿದೆ. ಇತರೆ ದೇಗುಲಗಳಲ್ಲಿ ನಡೆದ ಕಳ್ಳತನಕ್ಕೂ ಈತನಿಗೂ ಸಂಬಂಧ ಇದೆ ಎಂದು ಶಂಕಿಸಲಾಗಿದೆ’ ಎಂದೂ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT