ಜಿನೇವಾ: ಪರಮಾಣು ಕಾರ್ಯಕ್ರಮಗಳ ಕುರಿತಂತೆ ಜಿನೇವಾದಲ್ಲಿ ಇರಾನ್ ಹಾಗೂ ಅಮೆರಿಕ ನಡುವೆ ಎರಡನೇ ಸುತ್ತಿನ ಮಾತುಕತೆ ನಡೆಯುತ್ತಿರುವಂತೆಯೇ, ಮಧ್ಯಪ್ರಾಚ್ಯದಲ್ಲಿ ಅಮೆರಿಕ ತನ್ನ ಸೇನಾ ನಿಯೋಜನೆಯನ್ನು ಹೆಚ್ಚು ಮಾಡಿದ್ದು, ಇರಾನ್ ಕೂಡ ನೌಕಾಪಡೆಯ ಕಸರತ್ತು ಮುಂದುವರಿಸಿದೆ.

ಮಾತುಕತೆ ಆರಂಭಗೊಂಡಿರುವಂತೆಯೇ, ಹೋರ್ಮುಜ್ ಜಲಸಂದಿಯ ಕಡೆಗೆ ಇರಾನ್ ಕ್ಷಿಪಣಿಗಳನ್ನು ಹಾರಿಸಿವೆ ಎಂದು ಇರಾನ್ನ ಮಾಧ್ಯಮ ವರದಿ ಮಾಡಿವೆ.

ಜಗತ್ತಿಗೆ ಪೂರೈಕೆಯಾಗುವ ಕಚ್ಚಾತೈಲದ ಶೇಕಡಾ 20ರಷ್ಟು ಇದೇ ಜಲಸಂದಿಯ ಮೂಲಕ ಸಾಗುತ್ತದೆ. ಇದೇ ಜಾಗದಲ್ಲಿ ಸೋಮವಾರ ನೌಕಾಪಡೆಯ ಕಸರತ್ತು ಆರಂಭಿಸುವುದಾಗಿ ಇರಾನ್ ತಿಳಿಸಿತ್ತು.

‘ಇರಾನ್ನ ಒಳಗೆ ಹಾಗೂ ಹೋರ್ಮುಜ್ ಜಲಸಂದಿಯ ಕರಾವಳಿ ತಟದಲ್ಲಿರುವ ಗುರಿಗಳ ಮೇಲೆ ಕ್ಷಿಪಣಿ ದಾಳಿ ನಡೆಸಲಾಯಿತು’ ಎಂದು ಇಲ್ಲಿನ ‘ತಸ್ನಿಂ’ ಸುದ್ದಿಸಂಸ್ಥೆ ವರದಿ ಮಾಡಿದೆ.

‘ಪರಮಾಣು ಕಾರ್ಯಕ್ರಮದ ಕುರಿತು ಅಮೆರಿಕದ ಜೊತೆಗೆ ಮಾತುಕತೆ ನಡೆಯುತ್ತಿದೆ. ದೇಶದೊಳಗಿನ ನೀತಿಯ ಕುರಿತಂತೆ ಮಾತುಕತೆಯೂ ಒಳಗೊಂಡಿಲ್ಲ’ ಎಂದು ಇರಾನ್ನ ಸರ್ಕಾರಿ ಸುದ್ದಿ ವಾಹಿನಿ ವರದಿ ಮಾಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.