ಬಾಗ್ದಾದ್: ಇರಾಕ್ ಪಡೆಗಳು ಮಂಗಳವಾರ ನಡೆಸಿದ ಕಾರ್ಯಾಚರಣೆಯಲ್ಲಿ ಇಸ್ಲಾಮಿಕ್ ಸ್ಟೇಟ್ ಉಗ್ರಗಾಮಿಗಳ ಸಂಘಟನೆಯ ಕಮಾಂಡರ್ ಮತ್ತು ಇತರೆ ಎಂಟು ಅಧಿಕಾರಿಗಳನ್ನು ಹತ್ಯೆ ಮಾಡಿವೆ ಎಂದು ಪ್ರಧಾನಿ ಇಲ್ಲಿ ಪ್ರಕಟಿಸಿದರು.

ದೇಶದ ಹಮ್ರಿನ್ ಶಿಖರ ಪ್ರಾಂತ್ಯದಲ್ಲಿ ನಡೆದ ಚಕಮಕಿಯಲ್ಲಿ ಜಾಸ್ಸಿಂ ಅಲ್ ಮಜ್ರೂಯಿ ಅಬು ಅಬ್ದುಲ್ ಖಾದೆರ್ ಹತನಾದ ಎಂದು ಪ್ರಧಾನಿ ಶಿಯಾ ಅಲ್ ಸುದಾನಿ ತಿಳಿಸಿದರು.

‘ಇರಾಕ್ನಲ್ಲಿ ಉಗ್ರಗಾಮಿಗಳಿಗೆ ಅವಕಾಶವಿಲ್ಲ. ಅವರ ಅಡಗುತಾಣಗಳಿಗೇ ನುಗ್ಗಿ, ನಿರ್ಮೂಲನೆ ಮಾಡುತ್ತೇವೆ’ ಎಂದು ಸುದಾನಿ ಹೇಳಿಕೆಯಲ್ಲಿ ಎಚ್ಚರಿಸಿದ್ದಾರೆ.

ಜಂಟಿ ಕಾರ್ಯಾಚರಣೆ ತಂಡದ ಕಮಾಂಡ್ ಈ ಕುರಿತ ಹೇಳಿಕೆಯಲ್ಲಿ, ಗುಪ್ತದಳದ ಖಚಿತ ಮಾಹಿತಿ ಆಧರಿಸಿ ದಾಳಿ ನಡೆಸಲಾಯಿತು. ದಾಳಿಯಲ್ಲಿ ಹತರಾದ ಇತರೆ ಅಧಿಕಾರಿಗಳ ವಿವರಗಳನ್ನು ಡಿಎನ್ಎ ಪರೀಕ್ಷೆಯ ಬಳಿಕ ಪ್ರಕಟಿಸಲಾಗುವುದು ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.