ಮಂಗಳವಾರ, 17 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಗಾಜಾ: ಮತ್ತೊಂದು ದಿನ ಕದನ ವಿರಾಮ ವಿಸ್ತರಣೆ

Published : 30 ನವೆಂಬರ್ 2023, 16:21 IST
Last Updated : 30 ನವೆಂಬರ್ 2023, 16:21 IST
ಫಾಲೋ ಮಾಡಿ
Comments

ಜೆರುಸಲೇಂ: ಇಸ್ರೇಲ್‌ ಹಾಗೂ ಹಮಾಸ್‌ ಬಂಡುಕೋರರು ಇನ್ನೂ ಒಂದು ದಿನ ತಾತ್ಕಾಲಿಕ ಕದನ ವಿರಾಮ ವಿಸ್ತರಣೆಗೆ ಒಪ್ಪಿಗೆ ನೀಡಿದ್ದಾರೆ ಎಂದು ಮಧ್ಯಸ್ಥಿಕೆಯ ಹೊಣೆ ಹೊತ್ತಿರುವ ಕತಾರ್‌ ಹೇಳಿದೆ.

ಎರಡು ದಿನ ವಿಸ್ತರಣೆಗೊಂಡಿದ್ದ ಕದನ ವಿರಾಮವು ಗುರುವಾರ ಬೆಳಿಗ್ಗೆ ಮುಕ್ತಾಯಗೊಂಡಿತ್ತು.‌ ಪ್ರತಿ 10 ಒತ್ತೆಯಾಳುಗಳ ಬಿಡುಗಡೆಗೆ ಒಂದು ದಿನ ವಿಸ್ತರಣೆ ಮಾಡಲು ಇಸ್ರೇಲ್ ಸಹಮತ ವ್ಯಕ್ತಪಡಿಸಿದೆ ಎಂದು ತಿಳಿಸಿದೆ.

ಹದಿನಾರು ವರ್ಷಗಳಿಂದ ಗಾಜಾ ಪಟ್ಟಿಯಲ್ಲಿ ಹಿಡಿತ ಸಾಧಿಸಿರುವ ಹಮಾಸ್‌ ನಿರ್ಮೂಲನೆ ಮಾಡುವುದಾಗಿ ಇಸ್ರೇಲ್ ಹೇಳಿದೆ. ಆದರೆ, ಗಾಜಾದ ಮೇಲೆ ನಡೆಸಿದ ದಾಳಿ ಬಗ್ಗೆ ಅಂತರರಾಷ್ಟ್ರಿಯ ಮಟ್ಟದಲ್ಲಿ ವ್ಯಾಪಕ ಟೀಕೆಗಳು ವ್ಯಕ್ತವಾಗಿವೆ. ದೀರ್ಘಕಾಲದವರೆಗೆ ಕದನ ವಿರಾಮ ಘೋಷಿಸಬೇಕು ಎಂದು ವಿಶ್ವಸಂಸ್ಥೆ ಒತ್ತಾಯಿಸಿದೆ.

ಪ್ಯಾಲೆಸ್ಟೀನ್‌ ನಾಗರಿಕರ ಬಿಡುಗಡೆ

ಕದನ ವಿರಾಮದ ಆರನೇ ದಿನವಾದ ಗುರುವಾರ ಒಪ್ಪಂದದಂತೆ ಪ್ಯಾಲೆಸ್ಟೀನ್‌ನ 30 ನಾಗರಿಕರನ್ನು ಇಸ್ರೇಲ್ ಬಿಡುಗಡೆ ಮಾಡಿದೆ ಎಂದು ಕತಾರ್‌ನ ವಿದೇಶಾಂಗ ಸಚಿವಾಲಯ ಹೇಳಿದೆ.

ಹಮಾಸ್‌ ಬಂಡುಕೋರರು 16 ಒತ್ತೆಯಾಳುಗಳನ್ನು ಬಿಡುಗಡೆ ಮಾಡಿದ್ದಾರೆ. ಇದಕ್ಕೆ ಪ್ರತಿಯಾಗಿ ಪ್ಯಾಲೆಸ್ಟೀನ್‌ ಜನರನ್ನು ಬಿಡುಗಡೆ ಮಾಡಿದೆ. ಇವರಲ್ಲಿ ಆಕ್ಟಿವಿಸ್ಟ್‌ ಅಹೆದ್ ತಮೀಮಿ ಕೂಡ ಇದ್ದಾರೆ.

2017ರಲ್ಲಿ ಇಸ್ರೇಲ್‌ ಸೈನಿಕನಿಗೆ ಈಕೆ ಕಪಾಳಮೋಕ್ಷ ಮಾಡಿದ್ದ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತ್ತು. ಬಳಿಕ ವೆಸ್ಟ್‌ ಬ್ಯಾಂಕ್‌ನ ಆಕೆಯ ಮನೆಯಲ್ಲಿಇಸ್ರೇಲ್‌ ಸೇನೆಯು ಬಂಧಿಸಿತ್ತು. ಇನ್‌ಸ್ಟಾಗ್ರಾಂನಲ್ಲಿ ಭಯೋತ್ಪಾದನೆಗೆ ಆಕೆ ಪ್ರಚೋದನೆ ನೀಡುತ್ತಿದ್ದಾರೆ ಎಂದು ಆರೋಪಿಸಿತ್ತು. 

ವಿಸ್ತರಣೆಗೆ ಒತ್ತಾಯ

ಗಾಜಾದಲ್ಲಿ ಕದನ ಆರಂಭವಾದ ಬಳಿಕ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಆ್ಯಂಟನಿ ಬ್ಲಿಂಕನ್‌ ಅವರು, ಮೂರನೇ ಬಾರಿಗೆ ಭೇಟಿ ನೀಡಿ ನಾಯಕರೊಂದಿಗೆ ಚರ್ಚಿಸಿದರು.

ಕದನ ವಿರಾಮವು ಉತ್ತಮ ಫಲಿತಾಂಶ ನೀಡಿದೆ. ಹಾಗಾಗಿ, ಮಾನವೀಯ ದೃಷ್ಟಿಯಿಂದ ಗಾಜಾ ಜನರಿಗೆ ಮತ್ತಷ್ಟು ನೆರವು ಕಲ್ಪಿಸಲು ಮತ್ತೆ ವಿಸ್ತರಿಸಬೇಕು ಎಂದು ಒತ್ತಾಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT