ವಾಷಿಂಗ್ಟನ್: ಗಾಜಾ ಆಡಳಿತದ ಮೇಲ್ವಿಚಾರಣೆ ನಡೆಸಲು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಸ್ಥಾಪಿಸಿರುವ ‘ಶಾಂತಿ ಮಂಡಳಿ’ಗೆ ಇಸ್ರೇಲ್ ಸೇರ್ಪಡೆಗೊಂಡಿದೆ ಎಂದು ಅಲ್ಲಿನ ಪ್ರಧಾನಿ ಬೆಂಜಮಿನ್ ನೆತನ್ಯಾಹು ಬುಧವಾರ ಹೇಳಿದರು.

ವಾಷಿಂಗ್ಟನ್ಗೆ ಭೇಟಿ ನೀಡಿದ್ದ ನೆತನ್ಯಾಹು ಅವರು ಟ್ರಂಪ್ ಹಾಗೂ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರುಬಿಯೊ ಅವರೊಂದಿಗೆ ಮಾತುಕತೆ ನಡೆಸಿದರು. ‘ಶಾಂತಿ ಮಂಡಳಿ’ಯ ಸದಸ್ಯನಾಗಿ ಇಸ್ರೇಲ್ನ ಸೇರ್ಪಡೆಗೆ ಸಹಿ ಮಾಡಿದ್ದೇನೆ’ ಎಂದು ನೆತನ್ಯಾಹು ಈ ವೇಳೆ ತಿಳಿಸಿದರು.

ಹಮಾಸ್ – ಇಸ್ರೇಲ್ ಕದನ ವಿರಾಮ ಒಪ್ಪಂದದ 2ನೇ ಹಂತದ ಅನ್ವಯ ರೂಪಿಸಲಾಗಿರುವ ‘ಗಾಜಾ ಶಾಂತಿ ಮಂಡಳಿ’ ಸೇರಲು ವಿವಿಧ ದೇಶಗಳ ನಾಯಕರಿಗೆ ಟ್ರಂಪ್ ಆಹ್ವಾನ ನೀಡಿದ್ದರು. ಪಾಕಿಸ್ತಾನ, ಯುಎಇ, ಸೌದಿ ಅರೇಬಿಯಾ, ಈಜಿಪ್ಟ್ ಸೇರಿ ಹಲವು ರಾಷ್ಟ್ರಗಳು ಈ ಮಂಡಳಿ ಸೇರಿವೆ.

ಗಾಜಾ ಪುನರ್ನಿರ್ಮಾಣದ ಕುರಿತು ಚರ್ಚಿಸಲು ಫೆ.19ರಂದು ಮಂಡಳಿಯ ಸದಸ್ಯ ರಾಷ್ಟ್ರಗಳು ಮೊದಲ ಸಭೆ ಸೇರಲಿವೆ.

ಹಮಾಸ್ – ಇಸ್ರೇಲ್ ನಡುವಿನ ಯುದ್ಧದಲ್ಲಿ ಈವರೆಗೆ 72 ಸಾವಿರಕ್ಕೂ ಅಧಿಕ ಪ್ಯಾಲೆಸ್ಟೀನಿಯರು ಸಾವಿಗೀಡಾಗಿದ್ದಾರೆ ಎಂದು ಗಾಜಾದ ಆರೋಗ್ಯ ಅಧಿಕಾರಿಗಳು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.