ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿರಿಯಾ ರಾಕೆಟ್ ಉಡಾವಣೆಗೆ ಪ್ರತಿಯಾಗಿ ಸೇನಾ ಮೂಲಸೌಕರ್ಯದ ಮೇಲೆ ಇಸ್ರೇಲ್ ದಾಳಿ

Published 25 ಅಕ್ಟೋಬರ್ 2023, 4:31 IST
Last Updated 25 ಅಕ್ಟೋಬರ್ 2023, 4:31 IST
ಅಕ್ಷರ ಗಾತ್ರ

ಟೆಲ್ ಅವೀವ್: ಸಿರಿಯಾದಿಂದ ಇಸ್ರೇಲ್ ಕಡೆಗೆ ರಾಕೆಟ್ ಉಡಾವಣೆಗಳಿಗೆ ಪ್ರತಿಕ್ರಿಯೆಯಾಗಿ ಬುಧವಾರ ಮುಂಜಾನೆ ತನ್ನ ಜೆಟ್‌ಗಳು ಸಿರಿಯಾ ಸೇನೆಯ ಮೂಲಸೌಕರ್ಯ ಮತ್ತು ಮಾರ್ಟರ್ ಲಾಂಚರ್‌ಗಳ ಮೇಲೆ ದಾಳಿ ನಡೆಸಿವೆ ಎಂದು ಇಸ್ರೇಲ್‌ನ ಮಿಲಿಟರಿ ಹೇಳಿದೆ.

ಮಂಗಳವಾರ ತಡರಾತ್ರಿ ಇಸ್ರೇಲ್‌ನ ಖಾಲಿ ಪ್ರದೇಶಗಳಲ್ಲಿ ಬಿದ್ದ ಸಿರಿಯಾದಿಂದ ಲಾಂಚ್ ಆಗಿದ್ದ ಎರಡು ರಾಕೆಟ್‌ಗಳನ್ನು ಗುರುತಿಸಲಾಗಿದೆ. ಉಡಾವಣೆಯಾದ ಮೂಲ ಸ್ಥಳದ ಮೇಲೆ ದಾಳಿ ಮಾಡಿದ್ದೇವೆ ಎಂದು ಇಸ್ರೇಲ್ ಹೇಳಿದೆ.

ಮತ್ತಷ್ಟು ಪ್ರತಿಕ್ರಿಯೆಯಾಗಿ, ಮಿಲಿಟರಿ ತನ್ನ ಫೈಟರ್ ಜೆಟ್‌ಗಳು ಸಿರಿಯಾ ಸೇನೆಗೆ ಸೇರಿದ ಮಿಲಿಟರಿ ಮೂಲಸೌಕರ್ಯ ಮತ್ತು ಮಾರ್ಟರ್ ಲಾಂಚರ್‌ಗಳ ಮೇಲೆ ದಾಳಿ ಮಾಡಿದವು ಎಂದು ಅದು ಹೇಳಿದೆ.

ಮಂಗಳವಾರ ಇಸ್ರೇಲಿ ಆಕ್ರಮಿತ ಗೋಲನ್ ಹೈಟ್ಸ್‌ನಲ್ಲಿ ವೈಮಾನಿಕ ದಾಳಿ ಸೈರನ್‌ಗಳನ್ನು ಹುಟ್ಟುಹಾಕಿದ ಎರಡು ರಾಕೆಟ್‌ಗಳನ್ನು ಸಿರಿಯಾ ಸೇನೆಯೇ ಹಾರಿಸಿದೆಯೇ ಎಂಬ ಬಗ್ಗೆ ಇಸ್ರೇಲ್ ಹೆಚ್ಚಿನ ಮಾಹಿತಿ ನೀಡಿಲ್ಲ.

ಈ ಕುರಿತಂತೆ ಸಿರಿಯಾದಿಂದಲೂ ಯಾವುದೇ ಪ್ರತಿಕ್ರಿಯೆ ಬಂದಿಲ್ಲ.

ಇಸ್ರೇಲ್ ಇತ್ತೀಚಿನ ದಿನಗಳಲ್ಲಿ ಲೆಬನಾನ್‌ನ ಹಿಜ್ಬುಲ್ಲಾ ಮತ್ತು ಸಿರಿಯಾದಲ್ಲಿನ ಉಗ್ರಗಾಮಿಗಳೊಂದಿಗೆ ಸಂಘರ್ಷದಲ್ಲಿ ತೊಡಗಿದೆ. ಇಸ್ರೇಲ್‌ನಲ್ಲಿ ಹಮಾಸ್ ಉಗ್ರರ ಮಾರಣಾಂತಿಕ ದಾಳಿಯ ನಂತರ ಗಾಜಾ ಪಟ್ಟಿಯಲ್ಲಿ ಹಮಾಸ್ ಉಗ್ರಗಾಮಿಗಳ ವಿರುದ್ಧ ತೀವ್ರ ದಾಳಿ ಮಾಡುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT