ಬೈರೂತ್: ಪೂರ್ವ ಲೆಬನಾನ್ ಮೇಲೆ ಇಸ್ರೇಲ್ ನಡೆಸಿದ ವೈಮಾನಿಕ ದಾಳಿಯಲ್ಲಿ ಪ್ಯಾಲೆಸ್ಟೀನಿಯನ್ ಗುಂಪಿನ ಹಿರಿಯ ಸದಸ್ಯ ಹಾಗೂ ಆತನ ಅಂಗರಕ್ಷಕ ಸೇರಿದಂತೆ ಅನೇಕರು ಮೃತಪಟ್ಟಿದ್ದಾರೆ.

ಲೆಬನಾನ್ನಿಂದ ಸಿರಿಯಾಕ್ಕೆ ತೆರಳುವಾಗ ಮಸ್ನಾ ಗಡಿ ಬಳಿ ಗುರುವಾರ ಮಧ್ಯಾಹ್ನ ನಡೆದ ವೈಮಾನಿಕ ದಾಳಿಯಲ್ಲಿ ಪಾಪ್ಯುಲರ್ ಫ್ರಂಟ್ ಫಾರ್ ದ ಲಿಬರೇಷನ್ ಆಫ್ ಪ್ಯಾಲೆಸ್ಟೀನ್ನ (ಪಿಎಫ್ಎಲ್ಪಿ) ಕೇಂದ್ರೀಯ ಸಮಿತಿ ಸದಸ್ಯ ಮೊಹಮ್ಮದ್ ವಿಶಾಹ್ ಹಾಗೂ ಅಂಗರಕ್ಷಕ ಮುಫಿದ್ ಹುಸೈನ್ ಮೃತಪಟ್ಟಿದ್ದಾರೆ ಎಂದು ಪಿಎಫ್ಎಲ್ಪಿ ವರದಿ ಹೇಳಿದೆ. ಆದರೆ, ಇದಕ್ಕೆ ಇಸ್ರೇಲ್ನಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ.

‘ಸ್ವಾತಂತ್ರ್ಯಕ್ಕೆ ತಮ್ಮ ಅಮೂಲ್ಯ ಆತ್ಮಗಳನ್ನು ನೀಡಿದ ಇಬ್ಬರು ನಿಷ್ಠಾವಂತ ಒಡನಾಡಿಗಳನ್ನು ನಾವು ಕಳೆದುಕೊಂಡಿದ್ದೇವೆ’ ಎಂದು ಪಿಎಫ್ಎಲ್ಪಿ ಅಧಿಕಾರಿ ಮರ್ವಾನ್ ಅಬ್ದೆಲ್ ಅಲ್ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದಾರೆ.

ಪೂರ್ವ ಲೆಬನಾನ್ನಲ್ಲಿ ಆರು ಮಂದಿ ಮೃತಪಟ್ಟಿದ್ದು, 10 ಮಂದಿ ಗಾಯಗೊಂಡಿದ್ದಾರೆ ಎಂದು ಲೆಬನಾನ್ನ ರಾಷ್ಟ್ರೀಯ ಸುದ್ದಿ ಸಂಸ್ಥೆಯು ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.