ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ಯಾಲೆಸ್ಟೀನ್ ಕಡೆಯ ರಫಾ ಗಡಿ ವಶಕ್ಕೆ ಪಡೆದ ಇಸ್ರೇಲ್ ಪಡೆಗಳು

Published 7 ಮೇ 2024, 5:52 IST
Last Updated 7 ಮೇ 2024, 5:52 IST
ಅಕ್ಷರ ಗಾತ್ರ

ಗಾಜಾ: ದಕ್ಷಿಣ ಗಾಜಾದಲ್ಲಿ ಈಜಿಪ್ಟ್‌ಗೆ ಹೊಂದಿಕೊಂಡಿರುವ ಪ್ಯಾಲೆಸ್ಟೀನ್ ಕಡೆಯ ರಫಾ ಗಡಿಯನ್ನು ಇಸ್ರೇಲ್ ಪಡೆಗಳು ನಿಯಂತ್ರಣಕ್ಕೆ ತೆಗೆದುಕೊಂಡಿವೆ ಎಂದು ಇಸ್ರೇಲ್‌ನ ಆರ್ಮಿ ರೇಡಿಯೊ ಮಂಗಳವಾರ ವರದಿ ಮಾಡಿದೆ.

ಈ ಬಗ್ಗೆ ಶೀಘ್ರದಲ್ಲೇ ಹೇಳಿಕೆಯನ್ನು ಬಿಡುಗಡೆ ಮಾಡುವುದಾಗಿ ಇಸ್ರೇಲಿ ಮಿಲಿಟರಿ ಹೇಳಿದೆ.

ಇಸ್ರೇಲ್‌ನ ಟ್ಯಾಂಕರ್‌ಗಳು ನಿಂತಿರುವ ಹಿನ್ನೆಲೆಯಲ್ಲಿ ಈಜಿಫ್ಟ್ ಪ್ರವೇಶಿಸುವ ಪ್ಯಾಲೆಸ್ಟೀನ್ ಕಡೆಯ ರಫಾ ಗಡಿ ಪ್ರವೇಶವನ್ನು ಮುಚ್ಚಲಾಗಿದೆ.

ಈ ಹಿನ್ನೆಲೆಯಲ್ಲಿ ಗಡಿಯಿಂದ ತೆರಳುತ್ತಿದ್ದ ಮಾನವೀಯ ನೆರವು ಸಹ ಸ್ಥಗಿತಗೊಂಡಿದೆ.

ಈ ನಡುವೆ ಒತ್ತೆಯಾಳುಗಳ ಬಿಡುಗಡೆ ಸಂಬಂಧ ಕತಾರ್ ಮತ್ತು ಈಜಿಫ್ಟ್ ಮಧ್ಯಸ್ಥಿಕೆಯಲ್ಲಿ ಸಂಧಾನಕ್ಕೆ ಹಮಾಸ್ ಬಂಡುಕೋರರು ಒಪ್ಪಿಗೆ ಸೂಚಿಸಿದ್ದರು. ಈ ನಡುವೆ ಇಸ್ರೇಲ್ ಆಕ್ರಮಣ ಮುಂದುವರಿಸಿರುವುದು ಸಂಧಾನ ಮಾತುಕತೆಗೆ ಹಿನ್ನಡೆಯಾಗಿದೆ.

ಈ ಮಾತುಕತೆ ಮೂಲಕ ಉಭಯ ದೇಶಗಳ ನಡುವಿನ ಸಂಘರ್ಷ ತಪ್ಪಿಸಿ, ಶಾಂತಿ ನೆಲೆಸುವಂತೆ ಮಾಡುವ ಉದ್ದೇಶ ಹೊಂದಲಾಗಿತ್ತು ಎಂದು ಸಿಎನ್‌ಎನ್‌ ಹೇಳಿದೆ.

ಸಂಧಾನ ಮಾತುಕತೆ ಪ್ರಕ್ರಿಯೆ ಭಾಗವಾಗಿ ಗಾಜಾದಿಂದ ಇಸ್ರೇಲ್ ಸೇನೆಯ ಹಿಂತೆಗೆತ, ವಿಮಾನಗಳ ಸಂಚಾರ 10 ಗಂಟೆ ಸ್ಥಗಿತ, ನೂರಾರು ಪ್ಯಾಲೆಸ್ಟೀನ್ ಒತ್ತೆಯಾಳುಗಳ ಬಿಡುಗಡೆ ವಿಷಯಗಳು ಇದ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT