ಸೋಮವಾರ, 24 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ಇಸ್ರೇಲ್ ಸೇನೆ ದಾಳಿ: ಏಳು ಪ್ಯಾಲೆಸ್ಟೀನಿಯನ್ನರ ಹತ್ಯೆ

Published 21 ಮೇ 2024, 11:24 IST
Last Updated 21 ಮೇ 2024, 11:24 IST
ಅಕ್ಷರ ಗಾತ್ರ

ಜೆನಿನ್ (ವೆಸ್ಟ್ ಬ್ಯಾಂಕ್) (ಎಪಿ): ಆಕ್ರಮಿತ ವೆಸ್ಟ್ ಬ್ಯಾಂಕ್‌ ಪ್ರದೇಶದ ಮೇಲೆ ಮಂಗಳವಾರ ದಾಳಿ ನಡೆಸಿರುವ ಇಸ್ರೇಲ್ ಪಡೆಗಳು, ಒಬ್ಬ ವೈದ್ಯ ಸೇರಿದಂತೆ ಪ್ಯಾಲೆಸ್ಟೀನ್‌ನ ಏಳು ಮಂದಿಯನ್ನು ಹತ್ಯೆ ಮಾಡಿವೆ ಎಂದು ಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ. 

ಹಮಾಸ್ ಬಂಡುಕೋರರನ್ನು ಸದೆಬಡಿಯುವ ಸಲುವಾಗಿ ಗಾಜಾಪಟ್ಟಿ ಮೇಲೆ ಇಸ್ರೇಲ್ ಯುದ್ಧ ಆರಂಭಿಸಿದ ಏಳು ತಿಂಗಳಿನಲ್ಲಿ ನಡೆದ ಭೀಕರ ಹಿಂಸಾಚಾರ ಘಟನೆಗಳಲ್ಲಿ ಇದೂ ಒಂದು ಎಂದು ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ. 

ಉತ್ತರ ವೆಸ್ಟ್‌ಬ್ಯಾಂಕ್‌ನ ಜೆನಿನ್ ನಗರದಲ್ಲಿ ಇಸ್ರೇಲ್‌ನ ದಾಳಿಯಲ್ಲಿ ತನ್ನ ಏಳು ಮಂದಿ ನಾಗರಿಕರು ಮೃತಪಟ್ಟಿದ್ದು, ಇತರ ಒಂಬತ್ತು ಮಂದಿ ಗಾಯಗೊಂಡಿದ್ದಾರೆ. ಅವರ ಗುರುತು ಇನ್ನಷ್ಟೇ ಪತ್ತೆಯಾಗಬೇಕಿದೆ ಎಂದು ಪ್ಯಾಲೆಸ್ಟೀನ್ ಆರೋಗ್ಯ ಸಚಿವಾಲಯ ತಿಳಿಸಿದೆ. 

ಜೆನಿನ್ ಸರ್ಕಾರಿ ಆಸ್ಪತ್ರೆಯ ನಿರ್ದೇಶಕ ವಿಸ್ಸಂ ಅಬೂಬಕರ್ ಮಾತನಾಡಿ, ‘ವೈದ್ಯ ಒಸ್ಸಾಯಡ್ ಕಮಲ್ ಜಬರೀನ್ ಸಹ ಹತ್ಯೆಗೀಡಾಗಿದ್ದಾರೆ. ಕೆಲಸಕ್ಕೆ ಬರುತ್ತಿದ್ದಾಗ ಅವರ ಕೊಲೆಯಾಗಿದೆ’ ಎಂದು ಹೇಳಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT