ದೀರ್ ಅಲ್-ಬಲಾಹ್(ಗಾಜಾ ಪಟ್ಟಿ): ಗಾಜಾ ಪಟ್ಟಿಯಾದ್ಯಂತ ರಾತ್ರಿಯಿಡೀ ಇಸ್ರೇಲ್ ದಾಳಿ ನಡೆಸಿದ್ದು, ಕನಿಷ್ಠ 31 ಜನರು ಸಾವಿಗೀಡಾಗಿದ್ದಾರೆ ಎಂದು ಸ್ಥಳೀಯ ಆಸ್ಪತ್ರೆಗಳು ತಿಳಿಸಿವೆ.

ಕಳೆದ ವಾರ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ಎರಡು ದಿನಗಳ ಶಾಂತಿ ಮಾತುಕತೆ ನಡೆಸಿದ್ದರು. ಆದರೆ, ಆ ಮಾತುಕತೆಗಳು ಕದನ ವಿರಾಮ ಮತ್ತು ಒತ್ತೆಯಾಳುಗಳ ಬಿಡುಗಡೆಯ ಕುರಿತು ಯಾವುದೇ ಪ್ರಗತಿಯ ಸೂಚನೆಯಿಲ್ಲದೆ ಕೊನೆಗೊಂಡಿದ್ದವು.

ದಕ್ಷಿಣ ಗಾಜಾದಲ್ಲಿ ನಡೆದ ದಾಳಿಯಲ್ಲಿ 12 ಜನರು ಸಾವಿಗೀಡಾಗಿದ್ದು, ಈ ಪೈಕಿ ನೆರವು ವಿತರಣೆಯಲ್ಲಿದ್ದ ಮೂವರು ಸೇರಿದ್ದಾರೆ ಎಂದು ಖಾನ್ ಯೂನಿಸ್ನಲ್ಲಿರುವ ನಾಸರ್ ಆಸ್ಪತ್ರೆ ತಿಳಿಸಿದೆ. ಉತ್ತರದಲ್ಲಿ ಸರಣಿ ದಾಳಿಗಳ ನಂತರ ಗಾಜಾ ನಗರದ ಶಿಫಾ ಆಸ್ಪತ್ರೆಗೆ ಮೂವರು ಮಕ್ಕಳು ಮತ್ತು ಇಬ್ಬರು ಮಹಿಳೆಯರು ಸೇರಿದಂತೆ 12 ಮೃತದೇಹಗಳು ಬಂದಿವೆ ಎಂದು ಆಸ್ಪತ್ರೆಯ ನಿರ್ದೇಶಕ ಡಾ. ಮೊಹಮ್ಮದ್ ಅಬು ಸೆಲ್ಮಿಯಾ ತಿಳಿಸಿದ್ದಾರೆ.

ಮಧ್ಯ ಗಾಜಾದಲ್ಲಿ ನಡೆದ ದಾಳಿಯಲ್ಲಿ ಏಳು ಮಂದಿ ಸಾವಿಗೀಡಾಗಿದ್ದು, 11 ಮಂದಿ ಗಾಯಗೊಂಡಿದ್ದಾರೆ ಎಂದು ಅಲ್-ಅವ್ಡಾ ಆಸ್ಪತ್ರೆ ವರದಿ ಮಾಡಿದೆ.

ಉಗ್ರಗಾಮಿಗಳನ್ನು ಮಾತ್ರ ಗುರಿಯಾಗಿಸಿಕೊಂಡು ನಾಗರಿಕರಿಗೆ ಹಾನಿ ಮಾಡುವುದನ್ನು ತಪ್ಪಿಸಲು ಪ್ರಯತ್ನಿಸಿದ್ದೇವೆ ಎಂದು ಇಸ್ರೇಲ್ ಮಿಲಿಟರಿ ಹೇಳಿದೆ. ಹಮಾಸ್ ಉಗ್ರಗಾಮಿಗಳು ಜನನಿಬಿಡ ಪ್ರದೇಶಗಳಲ್ಲಿ ಕಾರ್ಯನಿರ್ವಹಿಸುತ್ತಿರುವುದರಿಂದ ನಾಗರಿಕರ ಸಾವಿಗೆ ಹಮಾಸ್ ಕಾರಣ ಎಂದು ಅದು ಆರೋಪಿಸಿದೆ.

ಪ್ರತ್ಯೇಕವಾಗಿ, ಉತ್ತರ ಗಾಜಾದಲ್ಲಿ ಮೂವರು ಇಸ್ರೇಲ್ ಸೈನಿಕರು ಸಾವಿಗೀಡಾಗಿದ್ದಾರೆ ಎಂದು ಸೇನೆ ತಿಳಿಸಿದೆ. ನಿಯಮಗಳಿಗೆ ಅನುಸಾರವಾಗಿ ಹೆಸರು ಬಹಿರಂಗಪಡಿಸಲು ಇಚ್ಛಿಸದ ಮಿಲಿಟರಿ ಅಧಿಕಾರಿಯೊಬ್ಬರು ಸೋಮವಾರ ತಮ್ಮ ನೆಲೆಯಲ್ಲಿ ಸಂಭವಿಸಿದ ಸ್ಫೋಟದಲ್ಲಿ ಅವರು ಸಾವಿಗೀಡಾಗಿದ್ದಾರೆ ಎಂದು ಹೇಳಿದ್ದಾರೆ.

ಆಹಾರ ಮತ್ತು ಆರೋಗ್ಯ ಸೇವೆ ಒದಗಿಸುವವರು ಸೇರಿದಂತೆ ವಿಶ್ವಸಂಸ್ಥೆಯ ಸಂಸ್ಥೆಗಳು, ವಾರಾಂತ್ಯದಲ್ಲಿ ನೀಡಿದ ಎಚ್ಚರಿಕೆಯನ್ನು ಪುನರುಚ್ಚರಿಸಿದ್ದು, ಸಾಕಷ್ಟು ಇಂಧನ ಕೊರತೆ ಉಂಟಾಗುವ ಸಾಧ್ಯತೆ ಇದ್ದು,ಕೂಡಲೇ ಕಾರ್ಯಾಚರಣೆ ಸ್ಥಗಿತಕ್ಕೆ ಕರೆ ನಿಡಿದೆ.

ಜಂಟಿ ಹೇಳಿಕೆಯಲ್ಲಿ, ಆಸ್ಪತ್ರೆಗಳು ಈಗಾಗಲೇ ಕತ್ತಲೆಯಲ್ಲಿವೆ. ಆ್ಯಂಬುಲೆನ್ಸ್ಗಳು ಇನ್ನು ಮುಂದೆ ಚಲಿಸಲು ಸಾಧ್ಯವಿಲ್ಲ ಎಂದು ಅವರು ಹೇಳಿದ್ದಾರೆ. ಇಂಧನವಿಲ್ಲದೆ, ಸಾರಿಗೆ, ಜಲ ಸಂಸ್ಕರಣೆ, ನೈರ್ಮಲ್ಯ ಮತ್ತು ದೂರಸಂಪರ್ಕ ಸ್ಥಗಿತಗೊಳ್ಳುತ್ತದೆ. ಬೇಕರಿಗಳು ಮತ್ತು ಸಮುದಾಯ ಕಿಚನ್ಗಳು ಕಾರ್ಯನಿರ್ವಹಿಸಲು ಸಾಧ್ಯವಿಲ್ಲ ಎಂದು ಅವರು ಹೇಳಿದ್ದಾರೆ.

ಕಳೆದ ವಾರ ಸುಮಾರು 1,50,000 ಲೀಟರ್ ಇಂಧನ ಗಾಜಾಗೆ ಬಂದಿದೆ ಎಂದು ಏಜೆನ್ಸಿಗಳು ದೃಢಪಡಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.