ಇಲಾಟ್(ಇಸ್ರೇಲ್): ಮುಂಬೈನಲ್ಲಿ 2008ರ ನವೆಂಬರ್ 26ರಂದು ನಡೆದ ಉಗ್ರರ ದಾಳಿಯಲ್ಲಿ ಮೃತಪಟ್ಟವರ ನೆನಪಿಗಾಗಿ ಸ್ಮಾರಕವನ್ನು ನಿರ್ಮಿಸಲು ಇಸ್ರೇಲ್‌ನ ದಕ್ಷಿಣದ ಕರಾವಳಿ ನಗರವಾದ ಇಲಾಟ್‌ನಲ್ಲಿರುವ ಸಿತಾರ್ ಸಂಸ್ಥೆಯು ಯೋಜನೆ ರೂಪಿಸಿದೆ.

2001ರ ಸೆ.11ರಂದು ಅಮೆರಿಕದಲ್ಲಿ ವಿಶ್ವ ವಾಣಿಜ್ಯ ಕೇಂದ್ರದ ಮೇಲೆ ನಡೆದ ಉಗ್ರರ ದಾಳಿಯಲ್ಲಿ ಮೃತಪಟ್ಟವರ ಸ್ಮರಣಾರ್ಥ ಈಗಾಗಲೇ ಇಲಾಟ್‌ನಲ್ಲಿ ಸ್ಮಾರಕವನ್ನು ನಿರ್ಮಿಸಲಾಗಿದೆ. 2008ರಲ್ಲಿ ಪಾಕಿಸ್ತಾನ ಮೂಲದ ಲಷ್ಕರ್ ಎ ತಯಾಬಾದ 10 ಉಗ್ರರು ದಾಳಿ ನಡೆಸಿದ್ದ ಸಂದರ್ಭದಲ್ಲಿ ನಾರಿಮನ್ ಪಾಯಿಂಟ್‌ನಲ್ಲಿದ್ದ ‘ದಿ ಮುಂಬೈ ಚಾಬಾದ್ ಹೌಸ್’ ಅನ್ನೂ ಗುರಿಯಾಗಿಸಿದ್ದರು. ದಾಳಿಯಲ್ಲಿ ಆರು ಯೆಹೂದಿಗಳು ಸೇರಿದಂತೆ ಒಟ್ಟು 166 ಜನರು ಮೃತಪಟ್ಟಿದ್ದರು, 300ಕ್ಕೂ ಅಧಿಕ ಜನರು ಗಾಯಗೊಂಡಿದ್ದರು.

‘ದಾಳಿಯಲ್ಲಿ ಮೃತಪಟ್ಟವರ ಸ್ಮರಣಾರ್ಥ ಸ್ಮಾರಕ ನಿರ್ಮಣ ಕುರಿತು ಇಲಾಟ್‌ನ ಮೇಯರ್ ಮೀರ್ ಇತ್‌ಜಾಕ್ ಹಾ ಲೇವಿ ಅವರ ಜೊತೆ ಮಾತುಕತೆ ನಡೆಸಿದ್ದೇವೆ. ಈ ಕುರಿತು ಸಮಿತಿಯಲ್ಲಿ ನಿರ್ಧಾರ ಕೈಗೊಳ್ಳುವ ಸಕಾರಾತ್ಮಕ ಪ್ರತಿಕ್ರಿಯೆಯನ್ನು ಅವರು ನೀಡಿದ್ದಾರೆ’ ಎಂದು ಇಲಾಟ್‌ನಲ್ಲಿರುವ ವಲಸೆ ಯೆಹೂದಿಗ ಸಿತಾರ್ ಸಂಸ್ಥೆಯ ಪ್ರತಿನಿಧಿಗಳು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.