ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಂದು ಡೋಸ್ ಲಸಿಕೆ ‘ಡೆಲ್ಟಾ’ ವಿರುದ್ಧ ಪರಿಣಾಮಕಾರಿ: ಜಾನ್ಸನ್‌ ಅಂಡ್ ಜಾನ್ಸನ್

Last Updated 2 ಜುಲೈ 2021, 4:47 IST
ಅಕ್ಷರ ಗಾತ್ರ

ವಾಷಿಂಗ್ಟನ್: ಜಾನ್ಸನ್ ಅಂಡ್ ಜಾನ್ಸನ್ ಕಂಪನಿ ಅಭಿವೃದ್ಧಿಪಡಿಸಿರುವ ಕೋವಿಡ್ ಲಸಿಕೆಯು ಹೆಚ್ಚು ಸಾಂಕ್ರಾಮಿಕವಾಗಿರುವ ‘ಡೆಲ್ಟಾ’ಕೊರೊನಾ ರೂಪಾಂತರ ತಳಿ ವಿರುದ್ಧ ಪರಿಣಾಮಕಾರಿಯಾಗಿದೆ ಎಂದು ಕಂಪನಿಯು ತಿಳಿಸಿದೆ.

ಲಸಿಕೆ ಪಡೆದು 8 ತಿಂಗಳ ಬಳಿಕವೂ ಇದು ಡೆಲ್ಟಾ ವಿರುದ್ಧ ಪರಿಣಾಮಕಾರಿಯಾಗಿದೆ ಎಂದು ಅಧ್ಯಯನಗಳಲ್ಲಿ ಸಾಬೀತಾಗಿರುವುದಾಗಿ ಅದು ಹೇಳಿದೆ.

ಈ ವರದಿಯು, ಅಮೆರಿಕದಲ್ಲಿ ಈ ಲಸಿಕೆ ಪಡೆದಿರುವ 1.1 ಕೋಟಿ ಜನರಿಗೆ ಧೈರ್ಯ ನೀಡಿದೆ.

ಲಸಿಕೆಯ ಮೂಲ ವೈರಸ್ ವಿರುದ್ಧದ ಪರಿಣಾಮಕಾರಿತ್ವಕ್ಕೆ ಹೋಲಿಸಿದರೆ, ರೂಪಾಂತರ ತಳಿ ವಿರುದ್ಧದ ಪರಿಣಾಮದಲ್ಲಿ ಸಣ್ಣ ಪ್ರಮಾಣದ ಕುಸಿತ ಕಂಡುಬಂದಿದೆ ಎಂದು ಕಂಪನಿ ತಿಳಿಸಿದೆ. ಆದರೆ, ಬೀಟಾ ರೂಪಾಂತರಕ್ಕಿಂತ ಡೆಲ್ಟಾ ರೂಪಾಂತರದ ವಿರುದ್ಧ ಲಸಿಕೆಯು ಹೆಚ್ಚು ಪರಿಣಾಮಕಾರಿಯಾಗಿದೆ ಎಂದು ಹೇಳಿದೆ.

ಲಸಿಕೆಯಿಂದ ಉತ್ತೇಜಿಸಲ್ಪಟ್ಟ ಪ್ರತಿಕಾಯಗಳು ಕಾಲಾನಂತರದಲ್ಲಿ ಬಲವಾಗಿ ಬೆಳೆಯುತ್ತವೆ ಎಂದು ಸಂಶೋಧಕರು ವರದಿ ಮಾಡಿದ್ದಾರೆ.

ಅಧ್ಯಯನಗಳ ವರದಿಯನ್ನು ಸಂಸ್ಥೆಯು ಪತ್ರಿಕಾ ಪ್ರಕಟಣೆಯಲ್ಲಿ ವಿವರಿಸಿದೆ. ಆ ಅಧ್ಯಯನಗಳಲ್ಲಿ ಒಂದನ್ನು ವೈಜ್ಞಾನಿಕ ಜರ್ನಲ್‌ನಲ್ಲಿ ಪ್ರಕಟಿಸಲು ಸ್ವೀಕರಿಸಲಾಗಿದೆ ಎಂದು ಸಂಸ್ಥೆ ತಿಳಿಸಿದೆ.

ಇದೇವೇಳೆ, ‘ಕೋವಿಡ್ ರೂಪಾಂತರಗಳ ವ್ಯಾಪ್ತಿಯು ಜನರು ನಿರೀಕ್ಷಿಸಿದ್ದಕ್ಕಿಂತ ಮತ್ತಷ್ಟು ಮಾರಕವಾಗಿರುತ್ತದೆ’ ಎಂದು ಬೋಸ್ಟನ್‌ನ ಬೆತ್ ಇಸ್ರೇಲ್ ಡಿಕಾನೆಸ್ ವೈದ್ಯಕೀಯ ಕೇಂದ್ರದ ವೈರಾಲಜಿಸ್ಟ್ ಡಾ. ಡಾನ್ ಬಾರೌಚ್ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT