ಟ್ರುಡೊ ಜನಪ್ರಿಯತೆ ಕುಸಿತ
ಟ್ರುಡೊ ಅವರ ಜನಪ್ರಿಯತೆ ಕುಸಿಯುತ್ತಿರುವುದರ ನಡುವೆಯೇ ರಾಜೀನಾಮೆ ನಿರ್ಧಾರ ಹೊರಬಿದ್ದಿದೆ. ಕೆನಡಾದಲ್ಲಿ ಅಕ್ಟೋಬರ್ ಕೊನೆಯಲ್ಲಿ ಸಾರ್ವತ್ರಿಕ ಚುನಾವಣೆ ನಡೆಯಲಿದೆ. ಮುಂಬರುವ ಚುನಾವಣೆಯಲ್ಲಿ ಲಿಬರಲ್ ಪಾರ್ಟಿ ಹೀನಾಯ ಸೋಲು ಅನುಭವಿಸಲಿದ್ದು, ಕನ್ಸರ್ವೇಟಿವ್ ಪಾರ್ಟಿ ಅಧಿಕಾರಕ್ಕೇರಲಿದೆ ಎಂದು ಹಲವು ಸಮೀಕ್ಷೆಗಳು ತಿಳಿಸಿವೆ. ಟ್ರುಡೊ ನಾಯಕತ್ವಕ್ಕೆ ‘ಅಸಮ್ಮತಿ’ ಸೂಚಿಸುವವರ ಪ್ರಮಾಣ ಕಳೆದ ತಿಂಗಳ 24ರ ವೇಳೆ ಶೇ 68ರಷ್ಟಿತ್ತು ಎಂದು ಚುನಾವಣಾ ವಿಶ್ಲೇಷಕ ಆ್ಯಂಗಸ್ ರೀಡ್ ಹೇಳಿದ್ದರು. ಟ್ರುಡೊ, ಕಳೆದ ಕೆಲ ತಿಂಗಳುಗಳಿಂದ ಸ್ವಪಕ್ಷೀಯರಿಂದಲೇ ವಿರೋಧ ಎದುರಿಸುತ್ತಿದ್ದಾರೆ. ಲಿಬರಲ್ ಪಕ್ಷದ ಸಂಸದರೇ ಅವರ ರಾಜೀನಾಮೆಗೆ ಒತ್ತಾಯಿಸಿದ್ದರು. ಉಪ ಪ್ರಧಾನಿ ಕ್ರಿಸ್ಟಿಯಾ ಫ್ರೀಲ್ಯಾಂಡ್ ಅವರು ಡಿ.16ರಂದು ರಾಜೀನಾಮೆ ನೀಡಿದ್ದರು. ಇದರಿಂದ ಟ್ರುಡೊ ಅವರಿಗೆ ಹಿನ್ನಡೆಯಾಗಿತ್ತು.