ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಬೂಲ್ ಆತ್ಮಹತ್ಯಾ ದಾಳಿ: ಪ್ರತೀಕಾರದ ಪ್ರತಿಜ್ಞೆ ಮಾಡಿದ ಜೋ ಬೈಡನ್

Last Updated 27 ಆಗಸ್ಟ್ 2021, 4:56 IST
ಅಕ್ಷರ ಗಾತ್ರ

ಕಾಬೂಲ್: ಹಮೀದ್ ಕರ್ಜೈ ವಿಮಾನ ನಿಲ್ದಾಣದಲ್ಲಿ ಮಾರಣಾಂತಿಕ ಆತ್ಮಾಹುತಿ ಬಾಂಬ್ ದಾಳಿಯ ಹೊರತಾಗಿಯೂ ಅಫ್ಗಾನಿಸ್ತಾನದಿಂದ ಅಮೆರಿಕದ ನಾಗರಿಕರು ಮತ್ತು ಇತರರ ಸ್ಥಳಾಂತರ ಪ್ರಕ್ರಿಯೆಯನ್ನು ಪೂರ್ಣಗೊಳಿಸುವುದಾಗಿ ಅಮೆರಿಕ ಅಧ್ಯಕ್ಷ ಜೋ ಬೈಡನ್ ಹೇಳಿದ್ದಾರೆ.

ಅಲ್ಲದೆ, ಈ ಸಾವುಗಳಿಗೆ ಸೇಡು ತೀರಿಸಿಕೊಳ್ಳುತ್ತೇವೆ. ದಾಳಿ ನಡೆಸಿರುವ ಉಗ್ರರಿಗೆ ತಕ್ಕ ಉತ್ತರ ನೀಡುತ್ತೇವೆ ಎಂದು ಶ್ವೇತಭವನದಲ್ಲಿ ಮಾಡಿದ ಭಾವನಾತ್ಮಕ ಭಾಷಣದಲ್ಲಿ ಅವರು ಹೇಳಿದ್ದಾರೆ.

12 ಮಂದಿ ಅಮೆರಿಕದ ಯೋಧರು ಮತ್ತು 60ಕ್ಕೂ ಹೆಚ್ಚು ಅಫ್ಗಾನ್ ನಾಗರಿಕರನ್ನು ಕೊಂದ ದಾಳಿಗಳಿಗೆ ಇಸ್ಲಾಮಿಕ್ ಸ್ಟೇಟ್ ಗುಂಪಿನ ಅಫ್ಗಾನಿಸ್ತಾನದ ಅಂಗಸಂಸ್ಥೆಯೇ ಕಾರಣ ಎಂದು ಅವರು ಹೇಳಿದರು. ಅವರು ಈಗ ದೇಶವನ್ನು ನಿಯಂತ್ರಿಸುತ್ತಿರುವ ತಾಲಿಬಾನ್ ಜೊತೆ ಕೈಜೋಡಿಸಿರುವ ಬಗ್ಗೆ ಯಾವುದೇ ಪುರಾವೆಗಳಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ದಾಳಿ ನಡೆಸಿದವರು ಯಾರೆಂದು ನಮಗೆ ತಿಳಿದಿದೆ. ಆ ನಿರ್ಧಾರಕ್ಕೆ ಬರಲು ನಮಗೆ ಕೆಲವು ಕಾರಣಗಳಿವೆ’ಎಂದು ಅವರು ಬಾಂಬರ್‌ಗಳು ಮತ್ತು ಬಂದೂಕುಧಾರಿಗಳನ್ನು ಉಲ್ಲೇಖಿಸಿ ಹೇಳಿದರು.

ಕಾಬೂಲ್‌ನಿಂದ ಹೊರಬರಲು 1,000 ಅಮೆರಿಕನ್ನರು ಮತ್ತು ಇನ್ನೂ ಹೆಚ್ಚಿನ ಅಫ್ಗಾನಿಸ್ತಾನದ ಜನರು ಹೆಣಗಾಡುತ್ತಿದ್ದಾರೆ ಎಂದು ಅವರು ಹೇಳಿದರು.

‘ದಾಳಿಯ ಹಿಂದೆ ಯಾರ ಕೈವಾಡವಿದೆ ಎಂಬುದನ್ನು ಖಚಿತಪಡಿಸಿಕೊಂಡ ಬಳಿಕ ನಾವು ಅವರನ್ನು ಬೇಟೆಯಾಡದೆ ಬಿಡುವುದಿಲ್ಲ’ ಎಂದು ಸ್ಥಳಾಂತರ ಪ್ರಕ್ರಿಯೆಯೆ ಮೇಲ್ವಿಚಾರಣೆ ಮಾಡುತ್ತಿರುವ ಅಮೆರಿಕದ ಜನರಲ್ ಫ್ರಾಂಕ್ ಮೆಕೆಂಜಿ ಹೇಳಿದ್ದಾರೆ.

ಅಮೆರಿಕ ಬೆಂಬಲಿತ ಅಫ್ಗಾನ್ ಸರ್ಕಾರ ಪತನಗೊಂಡು, ತಾಲಿಬಾನ್ ದೇಶವನ್ನು ಸ್ವಾಧೀನಪಡಿಸಿಕೊಂಡ ನಂತರ ಅಫ್ಗಾನಿಸ್ತಾನದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ಈ ಕುರಿತಂತೆ ಅಮೆರಿಕದ ಬೈಡನ್ ನೇತೃತ್ವದ ಆಡಳಿತದ ವಿರುದ್ಧ ಭಾರೀ ಟೀಕೆ ವ್ಯಕ್ತವಾಗಿದೆ.

ಇಲ್ಲಿಯವರೆಗೆ, ಅಫ್ಗಾನಿಸ್ತಾನದಿಂದ 1,00,000ಕ್ಕೂ ಹೆಚ್ಚು ಜನರನ್ನು ಸ್ಥಳಾಂತರಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT