ಢಾಕಾ: ಬಾಂಗ್ಲಾದೇಶದ ಅತ್ಯಂತ ಪ್ರಭಾವಿ ಹಾಗೂ ವಿವಾದಾತ್ಮಕ ನಾಯಕರಲ್ಲಿ ಒಬ್ಬರಾದ ಮೊದಲ ಮಹಿಳಾ ಪ್ರಧಾನಿ ಖಲೀದಾ ಜಿಯಾ (80) ವಯೋಸಹಜ ಅನಾರೋಗ್ಯದಿಂದ ಮಂಗಳವಾರ ನಿಧನರಾದರು.

1945ರಲ್ಲಿ ಜನಿಸಿದ್ದ ಖಲೀದಾ ಸ್ವ ಇಚ್ಛೆಯಿಂದ ರಾಜಕೀಯ ಪ್ರವೇಶ ಮಾಡಿರಲಿಲ್ಲ. 15ರ ಹರೆಯದಲ್ಲೇ ಸೇನಾಧಿಕಾರಿ ಜಿಯಾಉರ್ ರೆಹಮಾನ್ ಅವರೊಂದಿಗೆ ವಿವಾಹವಾಗಿದ್ದರು. 1971ರ ಬಾಂಗ್ಲಾದೇಶ ವಿಮೋಚನಾ ಯುದ್ಧದಲ್ಲಿ ಜಿಯಾಉರ್ ರೆಹಮಾನ್ ಪ್ರಮುಖ ಪಾತ್ರ ವಹಿಸಿದ್ದರು. ಬಳಿಕ ಬಾಂಗ್ಲಾದೇಶ್ ನ್ಯಾಷನಲಿಸ್ಟ್ ಪಾರ್ಟಿ (ಬಿಎನ್ಪಿ) ಸ್ಥಾಪಿಸಿದ್ದರು. 1981ರಲ್ಲಿ ಜಿಯಾಉರ್ ರೆಹಮಾನ್ ಹತ್ಯೆಗೀಡಾಗಿದ್ದರು. ಬಳಿಕ ಬಿಎನ್ಪಿ ನಾಯಕತ್ವವನ್ನು ಖಲೀದಾ ವಹಿಸಿದ್ದರು.
.ಬಾಂಗ್ಲಾ ಮೊದಲ ಮಹಿಳಾ ಪ್ರಧಾನಿ ಖಲೀದಾ ಜಿಯಾ ಜನಿಸಿದ್ದು ಭಾರತದಲ್ಲಿ.ಕೊನೆಯವರೆಗೂ ಭಾರತದೊಂದಿಗೆ ನಂಟು ಉಳಿಸಿಕೊಂಡಿದ್ದ ಖಲೀದಾ ಜಿಯಾ.
ಇರ್ಶಾದ್ ನೇತೃತ್ವದ ಸರ್ವಾಧಿಕಾರಿ ಆಡಳಿತದ ವಿರುದ್ಧ ಖಲೀದಾ ಹೋರಾಟಕ್ಕಿಳಿದರು. 1991ರಲ್ಲಿ ನಡೆದ ಚುನಾವಣೆಯಲ್ಲಿ ಬಿಎನ್ಪಿ ಗೆಲುವು ಸಾಧಿಸಿ ಖಲೀದಾ ಜಿಯಾ ಬಾಂಗ್ಲಾದೇಶ ಮೊದಲ ಮಹಿಳಾ ಪ್ರಧಾನಿ ಎನಿಸಿದರು. ಖಲೀದಾ ನಾಯಕತ್ವದಲ್ಲಿ ದೇಶವು ಅಭಿವೃದ್ಧಿ ಪಥದತ್ತ ಸಾಗಿತ್ತು. 2001ರಿಂದ 2006ರ ವರೆಗೆ ಎರಡನೇ ಅವಧಿಗೆ ಆಯ್ಕೆಯಾದರು.

ಬಳಿಕ ತೀವ್ರವಾದಿ ಮುಸ್ಲಿಂ ಗುಂಪುಗಳೊಡನೆ ಮೈತ್ರಿ ಸಾಧಿಸಿರುವುದು ಹಿನ್ನೆಡೆಯಾಗಿ ಪರಿಣಿಮಿಸಿತು. ಅಲ್ಲದೆ ಭಾರಿ ಬೆಲೆ ತೆರಬೇಕಾಗಿ ಬಂತು. ಭಾರತ ವಿರೋಧಿ ಭಾವನೆಗಳನ್ನು ಹುಟ್ಟು ಹಾಕಿತು. ಮತ್ತೊಂದೆಡೆ ಪಾಕಿಸ್ತಾನದೊಂದಿಗೆ ಹೆಚ್ಚು ಆತ್ಮೀಯ ಸಂಬಂಧ ಹೊಂದಿತ್ತು. ಭಾರತ ವಿರುದ್ಧದ ದ್ವೇಷವನ್ನು ರಾಷ್ಟ್ರೀಯತೆ ಎಂಬಂತೆ ಬಿಂಬಿಸಲಾಯಿತು.

ಆದರೆ 2008ರಲ್ಲಿ ಶೇಖ್ ಹಸೀನಾ ಅಧಿಕಾರಕ್ಕೆ ಬಂದ ಬಳಿಕ ಖಲೀದಾ ಅವರ ಬಿಎನ್ಪಿ ಪಕ್ಷ ದುರ್ಬಲವಾಗುತ್ತಾ ಸಾಗಿತ್ತು. ಭ್ರಷ್ಟಾಚಾರ ಪ್ರಕರಣಗಳನ್ನು ಎದುರಿಸಿದರು. ಗೃಹಬಂಧನಕ್ಕೂ ಒಳಗಾದರು.

ಒಟ್ಟಾರೆಯಾಗಿ ಬಾಂಗ್ಲಾದೇಶದ ರಾಜಕಾರಣದಲ್ಲಿ ಖಲೀದಾ ಜಿಯಾ ಕ್ರಾಂತಿಕಾರಿ ಬದಲಾವಣೆಗೆ ಕಾರಣವಾದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.