ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ವಸಂಸ್ಥೆ ಮಾಜಿ ಮಹಾಪ್ರಧಾನ ಕಾರ್ಯದರ್ಶಿ ಕೋಫಿ ಅನ್ನಾನ್‌ ನಿಧನ

Last Updated 18 ಆಗಸ್ಟ್ 2018, 10:37 IST
ಅಕ್ಷರ ಗಾತ್ರ

ವಿಶ್ವಸಂಸ್ಥೆ ಮಾಜಿ ಮಹಾಪ್ರಧಾನ ಕಾರ್ಯದರ್ಶಿ, ನೊಬೆಲ್ ಶಾಂತಿ ಪುರಸ್ಕೃತ ಕೋಫಿ ಅನ್ನಾನ್‌(80)ಶನಿವಾರ ನಿಧನರಾದರು.

ಕೆಲವು ದಿನಗಳಲ್ಲಿ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಶನಿವಾರ ನಿಧನರಾಗಿರುವುದಾಗಿ ಕೋಫಿ ಅನ್ನಾನ್‌ ಫೌಂಡೇಷನ್ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

ವಿಶ್ವದ ಪ್ರಮುಖ ಸ್ಥಾನದಲ್ಲಿ ಜವಾಬ್ದಾರಿ ನಿರ್ವಹಿಸಿದ ಮೊದಲ ಆಫ್ರಿಕನ್‌ ಕಪ್ಪು ವರ್ಣೀಯ ಕೋಫಿ ಅನ್ನಾನ್‌. ಅವರು 1997–2006ರ ವರೆಗೂ ವಿಶ್ವಸಂಸ್ಥೆಯ ಪ್ರಮುಖರಾಗಿ ಕಾರ್ಯನಿರ್ವಹಿಸಿದ್ದರು. ಆ ಬಳಿಕ ಸಿರಿಯಾಗೆ ವಿಶ್ವಸಂಸ್ಥೆಯ ಶಾಂತಿ ಸಂಧಾನ ಪ್ರತಿನಿಧಿಯಾಗಿ ಸಂಘರ್ಷಕ್ಕೆ ಸೂಕ್ತ ಪರಿಹಾರ ಕಂಡು ಹಿಡಿಯುವ ನಿಟ್ಟಿನಲ್ಲಿ ಶ್ರಮಿಸಿದ್ದರು.

ಜಗತ್ತಿನ ಯಾವುದೇ ಮೂಲೆಯಲ್ಲಿ ಜನರು ನೆರವಾಗಿ ಹಂಬಲಿಸುತ್ತಿದ್ದರೆ ಅಲ್ಲಿಗೆ ಅನ್ನಾನ್‌ ಪೂರ್ಣ ಪ್ರಯತ್ನದ ಸಹಾಯಹಸ್ತ ಚಾಚುತ್ತಿದ್ದರು.

(ಎಕೆ 47 ಗನ್‌ ಅನ್ನು ಗಿಟಾರ್‌ ಆಗಿ ಪರಿವರ್ತಿಸಿದ ಮಾದರಿಯನ್ನು ವಿಶ್ವಸಂಸ್ಥೆಯ ವಿಯೆನ್ನಾ ಮುಖ್ಯಕಚೇರಿಯಲ್ಲಿ ಪ್ರದರ್ಶಿಸಿದ್ದ ಕೋಫಿ ಅನ್ನಾನ್‌)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT