ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉತ್ತರ ಕೊರಿಯಾದ ಕ್ಷಿಪಣಿ ಬಳಿಸಿ ರಷ್ಯಾ ದಾಳಿ

Published 22 ಫೆಬ್ರುವರಿ 2024, 15:37 IST
Last Updated 22 ಫೆಬ್ರುವರಿ 2024, 15:37 IST
ಅಕ್ಷರ ಗಾತ್ರ

ಕೀವ್‌, ಉಕ್ರೇನ್‌: ಉಕ್ರೇನ್‌ ಮೇಲೆ ದಾಳಿ ನಡೆಸಲು ರಷ್ಯಾ ಸೇನೆಯು ಉತ್ತರ ಕೊರಿಯಾದ ಕ್ಷಿಪಣಿಗಳನ್ನು ಬಳಸಿದೆ. ಈ ದಾಳಿಗಳಲ್ಲಿ ಉಕ್ರೇನ್‌ನ ಸುಮಾರು 24 ಮಂದಿ ಮೃತಪಟ್ಟು, 100ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ’ ಎಂದು ಉಕ್ರೇನ್‌ ಭದ್ರತಾ ಸೇವೆ (ಎಸ್‌ಬಿಯು) ಗುರುವಾರ ತಿಳಿಸಿದೆ.

ದಾಳಿ ನಡೆಸಲು ಬಳಸಿರುವ ಶಸ್ತ್ರಗಳು ‘ಹ್ವಾಸಾಂಗ್‌–11 ಖಂಡಾಂತರ ಕ್ಷಿಪಣಿ’ಗಳು ಎಂದು ತನಿಖೆಯಿಂದ ತಿಳಿದುಬಂದಿದೆ ಎಂದು ಎಸ್‌ಬಿಯು ಹೇಳಿದೆ. ಡಿಸೆಂಬರ್‌ ಅಂತ್ಯದಲ್ಲಿ ಉಕ್ರೇನ್‌ನ ದಕ್ಷಿಣ ಝಪೋರಿಝಝಿಯಾ ಪ್ರದೇಶದ ಮೇಲೆ ಮತ್ತು ಜನವರಿಯಲ್ಲಿ ರಾಜಧಾನಿ ಕೀವ್ ಮೇಲೆ ದಾಳಿ ನಡೆಸಲು ಈ ಕ್ಷಿಪಣಿಗಳನ್ನು ಬಳಸಲಾಗಿತ್ತು ಎಂದಿದೆ.

ಉತ್ತರ ಕೊರಿಯವು ರಷ್ಯಾಕ್ಕೆ ಖಂಡಾಂತರ ಕ್ಷಿಪಣಿಗಳು ಮತ್ತು ಉಡಾವಣಾ ವಾಹನಗಳನ್ನು ಕಳಿಸುತ್ತಿದೆ. ರಷ್ಯಾಕ್ಕೆ ಉತ್ತರ ಕೊರಿಯ ತನ್ನ ಬೆಂಬಲವನ್ನು ಹೆಚ್ಚಿಸಿರುವುದನ್ನು ಇದು ತೋರುತ್ತದೆ. ಇದು ಕಳವಳಕಾರಿ ಬೆಳವಣಿಗೆ ಎಂದು ಅಮೆರಿಕವು ಜನವರಿಯಲ್ಲಿ ಎಚ್ಚರಿಕೆ ನೀಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT