ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಲ್ಲರನ್ನೂ ಒಳಗೊಳ್ಳದ ತಾಲಿಬಾನ್: ವಿಶ್ವಸಂಸ್ಥೆ ಟೀಕೆ

ವಿಶ್ವಸಂಸ್ಥೆ ಮಾನವ ಹಕ್ಕುಗಳ ಸಮಿತಿ ಮುಖ್ಯಸ್ಥೆ ಮಿಶೆಲ್ ಬಶ್ಲೆಟ್ ಟೀಕೆ
Last Updated 14 ಸೆಪ್ಟೆಂಬರ್ 2021, 1:29 IST
ಅಕ್ಷರ ಗಾತ್ರ

ಜಿನೀವಾ: ಎಲ್ಲರನ್ನೂ ಒಳಗೊಳ್ಳುವ ಸರ್ಕಾರ ರಚಿಸುವುದಾಗಿ ತಾಲಿಬಾನ್ ಹೇಳಿತ್ತು. ಆದರೆ ಸರ್ಕಾರದಲ್ಲಿ ತಾಲಿಬಾನ್‌ನ ಪ್ರಮುಖರಿಗೆ ಮಾತ್ರವೇ ಅವಕಾಶ ನೀಡಿದ್ದು, ಮಹಿಳೆಯರನ್ನು ಹೊರಗಿಟ್ಟಿದೆ ಎಂದು ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಸಮಿತಿಯ ಮುಖ್ಯಸ್ಥೆ ಮಿಶೆಲ್ ಬಶ್ಲೆಟ್ ಟೀಕಿಸಿದ್ದಾರೆ.

ಜಿನೀವಾದಲ್ಲಿ ನಡೆದ ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಸಮಿತಿಯ ಸಭೆಯಲ್ಲಿ ಅವರು ಈ ಮಾತು ಹೇಳಿದ್ದಾರೆ.

1996-2001ರ ಅವಧಿಯಲ್ಲಿ ಅತ್ಯಂತ ಕ್ರೂರ ಮತ್ತು ಮೂಲಭೂತವಾದಿ ಸರ್ಕಾರ ನಡೆಸಿದ್ದ ತಾಲಿಬಾನ್, ಇದೇ ಆಗಸ್ಟ್ 15ರಂದು ಮತ್ತೆ ಅಫ್ಗಾನಿಸ್ತಾನವನ್ನು ಸಂಪೂರ್ಣವಾಗಿ ವಶಕ್ಕೆ ಪಡೆದಿದೆ. ಈ ಬಾರಿ ಎಲ್ಲರನ್ನೂ ಒಳಗೊಂಡ ಸರ್ಕಾರವನ್ನು ರಚಿಸುವುದಾಗಿ ತಾಲಿಬಾನ್ ಘೋಷಿಸಿತ್ತು. ಆದರೆ, ಕಳೆದ ವಾರ ಘೋಷಿಸಿದ ಹಂಗಾಮಿ ಸರ್ಕಾರದಲ್ಲಿ ತಾಲಿಬಾನ್‌ನ ಪ್ರಮುಖ ನಾಯಕರು ಮತ್ತು ಹಖ್ಖಾನಿ ಉಗ್ರರ ನಾಯಕರಿಗೆ ಸಚಿವ ಸ್ಥಾನ ನೀಡಿತ್ತು.

ಮಹಿಳೆಯರು ಮತ್ತು ಯುವಜನರು ಅರ್ಥಪೂರ್ಣವಾಗಿ ಭಾಗಿಯಾಗುವ ಹಾಗೂ ದೇಶದ ಎಲ್ಲಾ ಸಮುದಾಯಗಳನ್ನು ಒಳಗೊಳ್ಳುವ ಸರ್ಕಾರವನ್ನು ಅಫ್ಗನ್ನರು ಎದುರು ನೋಡುತ್ತಿದ್ದಾರೆ. ದಶಕಗಳಿಂದ ಇರುವ ಆಂತರಿಕ ಕಲಹವು ಈ ಮೂಲಕ ಬಗೆಹರಿಯಬೇಕು ಮತ್ತು ಶಾಂತಿ ನೆಲೆಸಬೇಕು ಎಂದು ಅಫ್ಗನ್ನರು ಬಯಸಿದ್ದಾರೆ ಎಂದು ಮಿಶೆಲ್ ಹೇಳಿದ್ದಾರೆ.

***

ಮಹಿಳೆಯರು ಮತ್ತು ಬಾಲಕಿಯರ ಹಕ್ಕುಗಳನ್ನು ಎತ್ತಿಹಿಡಿಯುವುದಾಗಿ ತಾಲಿಬಾನ್ ಹೇಳಿತ್ತು. ಆದರೆ ಪ್ರತಿದಿನವೂ ಅವರನ್ನು ಎಲ್ಲದರಿಂದ ದೂರ ಇಡಲಾಗುತ್ತಿದೆ.

– ಮಿಶೆಲ್ ಬಶ್ಲೆಟ್, ವಿಶ್ವ ಸಂಸ್ಥೆಯ ಮಾನವ ಹಕ್ಕುಗಳ ಸಮಿತಿಯ ಮುಖ್ಯಸ್ಥೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT