ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಂಡನ್ ರಾಯಲ್ ಆಲ್ಬರ್ಟ್ ಹಾಲ್‌ನಲ್ಲಿ ಮೊಳಗಿದ ಲತಾ ಮಂಗೇಶ್ಕರ್ ಹಾಡುಗಳು

Published 30 ಜುಲೈ 2023, 10:02 IST
Last Updated 30 ಜುಲೈ 2023, 10:02 IST
ಅಕ್ಷರ ಗಾತ್ರ

ಲಂಡನ್‌: ಭಾರತೀಯ ಸಂಗೀತ ದಿಗ್ಗಜೆ ಲತಾ ಮಂಗೇಶ್ಕರ್  ಅವರು ಲಂಡನ್‌ನ ರಾಯಲ್ ಆಲ್ಬರ್ಟ್ ಹಾಲ್‌ನಲ್ಲಿ ಅಪರೂಪದ ಸಂಗೀತದ ನೇರ ಪ್ರಸಾರ ಕಾರ್ಯಕ್ರಮವನ್ನು ನಡೆಸಿಕೊಟ್ಟ ಸುಮಾರು 49 ವರ್ಷಗಳ ನಂತರ, ಅವರಿಗೆ ಗೌರವ ಸಲ್ಲಿಸುವ ನಿಟ್ಟಿನಲ್ಲಿ ಅದೇ ಕಾರ್ಯಕ್ರಮದಲ್ಲಿ ಅವರ ಕೆಲವು ಜನಪ್ರಿಯ ಹಾಡುಗಳು ಮೊಳಗಿವೆ. 

BBCಯ ವಾರ್ಷಿಕ ಬೇಸಿಗೆ ಕಾರ್ಯಕ್ರಮದಲ್ಲಿ ಸಾಮಾನ್ಯವಾಗಿ ಪಾಶ್ಚಿಮಾತ್ಯ ಶಾಸ್ತ್ರೀಯ ಸಂಗೀತಕ್ಕೆ ಹೆಚ್ಚು ಪ್ರಾಶಸ್ತ್ಯವಿರಲಿದೆ. ಆದರೆ ಇದೇ ಮೊದಲ ಬಾರಿಗೆ 'ಲತಾ ಮಂಗೇಶ್ಕರ್: ಬಾಲಿವುಡ್ ಲೆಜೆಂಡ್' ಎನ್ನುವ ಹೆಸರಿನಲ್ಲಿ ಲತಾ ಅವರ ಹಾಡು ಮೊಳಗುವಂತೆ ಮಾಡಿದ್ದಾರೆ.

ಶುಕ್ರವಾರ ನಡೆದ ಈ ಕಾರ್ಯಕ್ರಮದಲ್ಲಿ, ಲತಾ ಮಂಗೇಶ್ಕರ್‌ ಅವರ 'ಯೇ ಮೇರೆ ವತನ್‌ ಕೆ ಲೋಗೊ’ ಸೇರಿದಂತೆ ಅನೇಕ ಜನಪ್ರಿಯ ಹಾಡುಗಳು ಖ್ಯಾತ ಗಾಯಕ ಪಲಕ್‌ ಮುಚ್ಚಾಲ್‌ ಸೇರಿ ಹಲವರ ಕಂಠದಲ್ಲಿ ಮೂಡಿಬಂದಿತು. 

ಒಂದು ದಶಕಗಿಂತಲೂ ಹಳೆಯ ಬಾಲಿವುಡ್‌ ಹಾಡುಗಳು ಕಾರ್ಯಕ್ರದಲ್ಲಿ ಕೇಳಿಬಂದವು.

ಲತಾ ಮಂಗೇಶ್ಕರ್ ಅವರು ತಮ್ಮ 92ನೇ ವಯಸ್ಸಿನಲ್ಲಿ 2022 ಫೆಬ್ರವರಿಯಲ್ಲಿ ಮೃತಪಟ್ಟಿದ್ದಾರೆ.

ರಾಯಲ್ ಆಲ್ಬರ್ಟ್ ಹಾಲ್ ಲಂಡನ್‌ನ ವೆಸ್ಟ್‌ಮಿನಿಸ್ಟರ್ ನಗರದಲ್ಲಿ ಇದೆ. ಬ್ರಿಟನ್‌ನ ಪ್ರಮುಖ ಕನ್ಸರ್ಟ್ ಹಾಲ್‌ಗಳು ಮತ್ತು ಪ್ರಮುಖ ಹೆಗ್ಗುರುತುಗಳಲ್ಲಿ ಒಂದಾದ ಇದು ಆಲ್ಬರ್ಟ್ ಮೆಮೋರಿಯಲ್‌ನ ದಕ್ಷಿಣಕ್ಕೆ ಮತ್ತು ಇಂಪೀರಿಯಲ್ ಕಾಲೇಜ್ ಆಫ್ ಸೈನ್ಸ್, ಟೆಕ್ನಾಲಜಿ ಮತ್ತು ಮೆಡಿಸಿನ್‌ನ ಉತ್ತರದಲ್ಲಿದೆ. ವಿಕ್ಟೋರಿಯಾ ರಾಣಿ ಮತ್ತು ಪ್ರಿನ್ಸ್ ಆಲ್ಬರ್ಟ್‌ಗೆ  ಈ ಕಟ್ಟಡವನ್ನು ಅರ್ಪಿಸಲಾಗಿದೆ. ವೃತ್ತಾಕಾರದಲ್ಲಿ ಬೃಹದಾಕಾರವಾಗಿರುವ ಈ ಹಾಲ್‌ಅನ್ನು 1867-71 ರಲ್ಲಿ ನಿರ್ಮಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT