ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಸಾ ಟೆಲಿಸ್ಕೋಪ್‌ ಉಡಾವಣೆ ಮುಂದೂಡಿಕೆ

Last Updated 23 ನವೆಂಬರ್ 2021, 12:38 IST
ಅಕ್ಷರ ಗಾತ್ರ

ಬರ್ಲಿನ್‌: ಹಬ್ಬಲ್‌ ದೂರದರ್ಶಕಕ್ಕೆ (ಟೆಲಿಸ್ಕೋಪ್‌) ಪರ್ಯಾಯವಾದ, ನಾಸಾದ ಹೊಸ ಟೆಲಿಸ್ಕೋಪ್‌ ಅನ್ನು ಕಕ್ಷೆಗೆ ಕಳುಹಿಸುವ ಪ್ರಕ್ರಿಯೆ ಮುಂದೂಡಲಾಗಿದೆ ಯುರೋಪಿಯನ್‌ನ ಬಾಹ್ಯಾಕಾಶ ಸಂಸ್ಥೆ (ಇಎಸ್‌ಎ) ತಿಳಿಸಿದೆ.

ಇಎಸ್‌ಎ ಈ ಕುರಿತು ಹೇಳಿಕೆ ನೀಡಿದ್ದು, ಫ್ರೆಂಚ್ ಗಯಾನಾದಲ್ಲಿ ನಡೆದಿದ್ದ ಘಟನೆಯಲ್ಲಿ ಟೆಲಿಸ್ಕೋಪ್‌ ಜಖಂಗೊಂಡಿದೆಯೇ ಎಂಬುದರ ಪರಿಶೀಲನೆಗೆ ಮುಂದೂಡಲಾಗಿದೆ.ಉಡಾವಣಾ ವಾಹಕಕ್ಕೆ ಜೇಮ್ಸ್‌ ವೆಬ್‌ ಸ್ಪೇಸ್‌ ಟೆಲಿಸ್ಕೋಪ್‌ ಅನ್ನು ಅಳವಡಿಸುವಾಗ ಜಾರಿದ್ದು, ಜಖಂಗೊಂಡಿದೆಯೇ ಎಂದು ಪರಿಶೀಲಿಸಲಾಗುತ್ತಿದೆ ತಿಳಿಸಿದೆ.

ಟೆಲಿಸ್ಕೋಪ್‌ ಅನ್ನು ಈಗ ಎರೈನಾ 5 ರಾಕೆಟ್‌ ಮೂಲಕ ಡಿಸೆಂಬರ್‌ 22ರಂದು ಉಡಾವಣೆ ಮಾಡಲಾಗುವುದು. ಈ ಮೊದಲು ನಿಗದಿಯಾಗಿದ್ದಂತೆ ಡಿಸೆಂಬರ್‌ 18ರಂದು ಉಡಾವಣೆ ಮಾಡಬೇಕಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT