ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗ್ರೀಸ್‌ನಲ್ಲಿ 5.8 ತೀವ್ರತೆಯ ಭೂಕಂಪ

Published 29 ಮಾರ್ಚ್ 2024, 9:36 IST
Last Updated 29 ಮಾರ್ಚ್ 2024, 9:36 IST
ಅಕ್ಷರ ಗಾತ್ರ

ಅಥೆನ್ಸ್: ಗ್ರೀಸ್‌ನಲ್ಲಿ ಶುಕ್ರವಾರ ಮುಂಜಾನೆ 5.8 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ.

ಭೂಕಂಪದಿಂದ ಯಾವುದೇ ಸಾವು, ಹಾನಿ ಅಥವಾ ಗಾಯಾಳುಗಳ ಬಗ್ಗೆ ತಕ್ಷಣಕ್ಕೆ ಯಾವುದೇ ವರದಿಗಳಾಗಿಲ್ಲ. 

ಪಶ್ಚಿಮ ಪೆಲೊಪೊನೀಸ್‌ ಕರಾವಳಿಯ ದಕ್ಷಿಣ ಗ್ರೀಕ್‌ನಲ್ಲಿ ಭೂಕಂಪ ಸಂಭವಿಸಿದೆ ಎನ್ನಲಾಗಿದೆ. ಗ್ರೀಕ್‌ ರಾಜಧಾನಿ ಅಥೆನ್ಸ್‌ನಿಂದ ದಕ್ಷಿಣದ ಕ್ರೀಟ್ ದ್ವೀಪದವರೆಗೂ ಭೂಕಂಪ ಸಂಭವಿಸಿದೆ.


ಪಶ್ಚಿಮದ ನಗರವಾದ ಪತ್ರಾಸ್‌ನ ದಕ್ಷಿಣ ನೈಋತ್ಯಕ್ಕೆ ಸುಮಾರು 120 ಕಿ.ಮೀ. ದೂರದಲ್ಲಿರುವ ಸ್ಟ್ರೋಫೇಡ್ಸ್‌ ದ್ವೀಪದ ಬಳಿ ಸಮುದ್ರದ ತಳಭಾಗದಲ್ಲಿ ಭೂಕಂಪ ಕೇಂದ್ರೀಕೃತವಾಗಿತ್ತು ಎಂದು ಅಥೆನ್ಸ್‌ನ ಜಿಯೊಡೈನಾಮಿಕ್‌ ಇನ್‌ಸ್ಟಿಟ್ಯೂಟ್ ತಿಳಿಸಿದೆ. ಭೂಕಂಪ ಹೆಚ್ಚು ಉಂಟಾಗುವ ಭೂ ಪ್ರದೇಶದಲ್ಲಿ ಗ್ರೀಕ್‌ ಇದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT