ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಬಲ ಭೂಕಂಪ: ದಕ್ಷಿಣ ಪೆಸಿಫಿಕ್‌ ರಾಷ್ಟ್ರಗಳಲ್ಲಿ ಸುನಾಮಿ ಆತಂಕ

Published 19 ಮೇ 2023, 5:05 IST
Last Updated 19 ಮೇ 2023, 5:05 IST
ಅಕ್ಷರ ಗಾತ್ರ

ನೌಮಿಯಾ: ಫ್ರಾನ್ಸಿನ ನ್ಯೂ ಕ್ಯಾಲೆಡೋನಿಯಾದ ಲಾಯಲ್ಟಿ ಐಲ್ಯಾಂಡ್ಸ್‌ನ ಆಗ್ನೇಯ ಭಾಗದಲ್ಲಿ ಶುಕ್ರವಾರ 7.7 ತೀವ್ರತೆ ಪ್ರಬಲ ಭೂಕಂಪ ಉಂಟಾಗಿದೆ. ಹೀಗಾಗಿ ದಕ್ಷಿಣ ಪೆಸಿಫಿಕ್‌ನ ದೇಶಗಳಿಗೆ ಸುನಾಮಿ ಎಚ್ಚರಿಕೆಗಳನ್ನು ನೀಡಲಾಗಿದೆ.

ವನವಾಟು, ಫಿಜಿ ಮತ್ತು ನ್ಯೂ ಕ್ಯಾಲೆಡೋನಿಯಾಕ್ಕೆ ಸುನಾಮಿ ಎಚ್ಚರಿಕೆ ನೀಡಲಾಗಿದೆ ಎಂದು ‘ಪೆಸಿಫಿಕ್ ಸುನಾಮಿ ಎಚ್ಚರಿಕೆ ಕೇಂದ್ರ (ಪಿಟಿಡಬ್ಲ್ಯುಸಿ)’ ತಿಳಿಸಿದೆ. ಆಸ್ಟ್ರೇಲಿಯಾದ ಹವಾಮಾನ ಇಲಾಖೆ ತನ್ನ ಪೂರ್ವ ಕರಾವಳಿಯಲ್ಲಿರುವ ಲಾರ್ಡ್ ಹೋವ್ ದ್ವೀಪಕ್ಕೆ ಅಪಾಯವಿದೆ ಎಂದು ಹೇಳಿದೆ.

ಲಾಯಲ್ಟಿ ಐಲ್ಯಾಂಡ್ಸ್‌ನ ಆಗ್ನೇಯ ಭಾಗದಲ್ಲಿ ಸುಮಾರು 38 ಕಿಮೀ (24 ಮೈಲುಗಳು) ಆಳದಲ್ಲಿ ಭೂಕಂಪ ಸಂಭವಿಸಿದೆ ಎಂದು ಅಮೆರಿಕದ ಭೂವಿಜ್ಞಾನ ಇಲಾಖೆ ಹೇಳಿದೆ.

ಭೂಕಂಪದಿಂದಾಗಿ ತನ್ನ ಕರಾವಳಿ ಪ್ರದೇಶಕ್ಕೆ ಸುನಾಮಿ ಅಪ್ಪಳಿಸುವ ಸಾಧ್ಯತೆಗಳಿವೆಯೇ ಎಂಬುದನ್ನು ನಿರ್ಣಯಿಸುತ್ತಿರುವುದಾಗಿ ನ್ಯೂಜಿಲೆಂಡ್ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT