ಮಾಲೆ: ಮಾಲ್ದೀವ್ಸ್ ಮತ್ತು ಭಾರತದ ನಡುವಿನ ‘ಭಿನ್ನಾಭಿಪ್ರಾಯಗಳು’ ಪರಿಹಾರವಾಗಿವೆ ಎಂದು ಮಾಲ್ದೀವ್ಸ್ ವಿದೇಶಾಂಗ ವ್ಯವಹಾರಗಳ ಸಚಿವ ಮೊಸಾ ಜಮೀರ್ ಅವರು ಹೇಳಿದರು.

ಶ್ರೀಲಂಕಾಗೆ ಶುಕ್ರವಾರ ಭೇಟಿ ನೀಡಿದ್ದ ಅವರು, ಪ್ರಮುಖ ಮಿತ್ರ ದೇಶಗಳು ಅದರಲ್ಲೂ ಭಾರತ ಮತ್ತು ಚೀನಾದೊಂದಿಗಿನ ಸಂಬಂಧ ಎಷ್ಟು ಮುಖ್ಯ ಎಂದು ಒತ್ತಿ ಹೇಳಿದರು.

ಅಧ್ಯಕ್ಷ ಮೊಹಮ್ಮದ್ ಮುಯಿಜು ಅವರು ಅಧಿಕಾರ ವಹಿಸಿಕೊಂಡ ಆರಂಭದ ದಿನಗಳಲ್ಲಿ ಉಭಯ ದೇಶಗಳ ನಡುವಣ ರಾಜತಾಂತ್ರಿಕ ಸಂಬಂಧದಲ್ಲಿ ಬಿಕ್ಕಟ್ಟು ತಲೆದೋರಿತ್ತು. ಮಾಲ್ದೀವ್ಸ್‌ನಿಂದ ಭಾರತೀಯ ಪಡೆಗಳನ್ನು ವಾಪಸಾತಿ ನಂತರ ಉಭಯ ದೇಶಗಳ ನಡುವಣ ‘ತಪ್ಪು ತಿಳಿವಳಿಕೆ’ಗಳು ದೂರವಾಗಿವೆ ಎಂದು ತಿಳಿಸಿದರು.

ಭಾರತ–ಚೀನಾದೊಂದಿಗೆ ಉತ್ತಮ ಸಂಬಂಧ ಹೊಂದಿದ್ದೇವೆ. ಎರಡೂ ದೇಶಗಳು ಮಾಲ್ದೀವ್ಸ್ ಬೆಂಬಲಿಸುತ್ತವೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.