ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮಾಲ್ದೀವ್ಸ್‌ ಸರ್ಕಾರ ಭಾರತದ ಕ್ಷಮೆ ಕೇಳಬೇಕಿತ್ತು: ಮಾಲ್ದೀವ್ಸ್‌ ಮಾಜಿ ಉಪಾಧ್ಯಕ್ಷ

Published 8 ಜನವರಿ 2024, 15:27 IST
Last Updated 8 ಜನವರಿ 2024, 15:27 IST
ಅಕ್ಷರ ಗಾತ್ರ

ಮಾಲೆ: ‘ಉಪ ಸಚಿವರ ಹೇಳಿಕೆ ಕುರಿತು ಮಾಲ್ದೀವ್ಸ್‌ ಸರ್ಕಾರವು ಕ್ಷಮೆ ಕೇಳಬೇಕಿತ್ತು, ಅಧ್ಯಕ್ಷ ಮೊಹಮ್ಮದ್ ಮುಯಿಜು ಅವರು ಭಾರತದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಸಂಪರ್ಕಿಸಿ ರಾಜತಾಂತ್ರಿಕ ಬಿಕ್ಕಟ್ಟನ್ನು ಬಗೆಹರಿಸಿಕೊಳ್ಳಬೇಕಿತ್ತು’ ಎಂದು ಮಾಲ್ದೀವ್ಸ್‌ನ ಮಾಜಿ ಉಪಾಧ್ಯಕ್ಷ ಅಹ್ಮದ್‌ ಅದೀಬ್‌ ಹೇಳಿದ್ದಾರೆ.

ಪಿಟಿಐ ಸುದ್ದಿಸಂಸ್ಥೆಗೆ ಸಂದರ್ಶನ ನೀಡಿರುವ ಅವರು, ‘ದೇಶದ ಉಪ ಸಚಿವರು ಭಾರತದ ಪ್ರಧಾನಿ ಕುರಿತು ಆಡಿರುವ ಮಾತುಗಳು ಸ್ವೀಕಾರ್ಹವಲ್ಲ’ ಎಂದಿದ್ದಾರೆ.

‘ಈ ರೀತಿಯ ಘಟನೆ ಎಂದಿಗೂ ಆಗಬಾರದಿತ್ತು. ಈ ಕುರಿತು ಮಾಲ್ದೀವ್ಸ್‌ ಸರ್ಕಾರವು ಇದಕ್ಕೂ ಮುಂಚೆಯೇ ಪ್ರತಿಕ್ರಿಯಿಸಬೇಕಿತ್ತು ಮತ್ತು ಕ್ರಮಗಳನ್ನು ಕೈಗೊಳ್ಳಬೇಕಿತ್ತು. ಈ ವಿಚಾರದಿಂದ ರಾಜತಾಂತ್ರಿಕ ಬಿಟ್ಟಕ್ಕನ್ನು ಸೃಷ್ಟಿಯಾಗಲು ಬಿಡಬಾರದಿತ್ತು’ ಎಂದಿದ್ದಾರೆ.

ಆಡಳಿತಾರೂಢ ಪಕ್ಷದಲ್ಲಿರುವ ಕೆಲ ತೀವ್ರಗಾಮಿಗಳು ‘ಭಾರತ ಹೊರಹೋಗಲಿ’ ಎಂದು ಕರೆ ನೀಡುತ್ತಿದ್ದಾರೆ. ಆದರೆ, ಸರ್ಕಾರ ನಡೆಸುವವರು ಹೆಚ್ಚು ಜವಾಬ್ದಾರಿಯಿಂದ ವರ್ತಿಸಬೇಕು. ಏಕೆಂದರೆ ಮಾಲ್ದೀವ್ಸ್‌ ಜನಜೀವನವು ಅವರದ್ದೇ ಜವಾಬ್ದಾರಿಯಾಗಿದೆ. ಈ ರೀತಿಯ ವಿಚಾರಗಳಲ್ಲಿ ಎಚ್ಚರಿಕೆ ಕಾಯ್ದುಕೊಳ್ಳಬೇಕು ಎಂದು ಅದೀಬ್‌ ಹೇಳಿದ್ದಾರೆ.

ಮೂವರು ಉಪ ಸಚಿವರ ಅಮಾನತಿನ ಕುರಿತು ಕೇಳಿದ ಪ್ರಶ್ನೆಗೆ, ‘ಅವರು ರಾಜೀನಾಮೆ ನೀಡಬೇಕಿತ್ತು. ಭಾನುವಾರ ಬೆಳಿಗ್ಗೆಯೇ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕಿತ್ತು’ ಎಂದಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT