ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಏರ್‌ ಫ್ರಾನ್ಸ್‌ ವಿಮಾನ ರದ್ದು: ಪ್ಯಾರಿಸ್‌ ನಿಲ್ದಾಣದಲ್ಲಿ ಸಿಲುಕಿದ ಭಾರತೀಯರು

Published 26 ಜೂನ್ 2023, 15:34 IST
Last Updated 26 ಜೂನ್ 2023, 15:34 IST
ಅಕ್ಷರ ಗಾತ್ರ

ನವದೆಹಲಿ: ಪ್ಯಾರಿಸ್‌ನಿಂದ ಟೊರೆಂಟೊ ತಲುಪಬೇಕಿದ್ದ ಏರ್‌ ಫ್ರಾನ್ಸ್‌ ವಿಮಾನವು ತಾಂತ್ರಿಕ ಸಮಸ್ಯೆಯಿಂದ ರದ್ದಾಗಿದ್ದು, ಪರ್ಯಾಯ ವಿಮಾನ ಲಭಿಸದೆ ಭಾರತ ಸೇರಿ ಹಲವು ದೇಶಗಳ ಪ್ರಯಾಣಿಕರು ಪ್ಯಾರಿಸ್‌ ವಿಮಾನ ನಿಲ್ದಾಣದಲ್ಲಿ ಸಿಲುಕಿದ್ದಾರೆ.

ಭಾರತೀಯ ಪ್ರಯಾಣಿಕರು ಎದುರಿಸುತ್ತಿರುವ ಸಮಸ್ಯೆಗಳನ್ನು ಎತ್ತಿತೋರಿಸುವ ಟ್ವೀಟಿಗರ ಸರಣಿ ಟ್ವೀಟ್‌ಗಳಿಗೆ ಏರ್ ಫ್ರಾನ್ಸ್ ಸಂಸ್ಥೆಯು ‘ಪ್ರಯಾಣಿಕರಿಗೆ ಆಗಿರುವ ಅನಾನುಕೂಲತೆಗೆ ಪ್ರಾಮಾಣಿಕವಾಗಿ ವಿಷಾದಿಸುತ್ತೇವೆ. ಸಾಧ್ಯವಾದಷ್ಟು ಶೀಘ್ರ ಪ್ರಯಾಣಿಕರನ್ನು ಅವರ ಗಮ್ಯ ಸ್ಥಳಕ್ಕೆ ಕರೆದೊಯ್ಯಲು  ಪ್ರಯತ್ನ ಮಾಡಲಾಗುತ್ತಿದೆ’ ಎಂದು ಟ್ವಿಟರ್‌ನಲ್ಲಿ ಪ್ರತಿಕ್ರಿಯಿಸಿದೆ.    

‘ಜೂನ್ 24ರಂದು ಪ್ಯಾರಿಸ್‌ನ ಚಾರ್ಲ್ಸ್ ಡಿ ಗಾಲೆ ವಿಮಾನ ನಿಲ್ದಾಣದಿಂದ ಟೊರೆಂಟೊಗೆ ಹೊರಟಿದ್ದ ಎಎಫ್356 ವಿಮಾನವನ್ನು ತಾಂತ್ರಿಕ ತೊಂದರೆಯಿಂದಾಗಿ ರದ್ದುಗೊಳಿಸಬೇಕಾಯಿತು. ಇದರಿಂದ ಷೆಂಗೆನ್ ವೀಸಾಗಳಿಲ್ಲದ ಕೆಲವು ಪ್ರಯಾಣಿಕರಿಗೆ ಟರ್ಮಿನಲ್‌ ಕಟ್ಟಡದಿಂದ ನಿರ್ಗಮಿಸಲು ಅವಕಾಶ ನೀಡಲಾಗಲಿಲ್ಲ. ತೊಂದರೆಗೆ ಸಿಲುಕಿದ ಪ್ರಯಾಣಿಕರಿಗೆ ಏರ್ ಫ್ರಾನ್ಸ್‌ ಸಿಬ್ಬಂದಿ ತಂಡ ನೆರವಾಯಿತು. ವಿಮಾನ ನಿಲ್ದಾಣದ ಮೀಸಲು ಪ್ರದೇಶದಲ್ಲಿ ಅವರಿಗೆಲ್ಲರಿಗೂ ವಾಸ್ತವ್ಯಕ್ಕೆ ಅವಕಾಶ ಕಲ್ಪಿಸಲಾಯಿತು’ ಎಂದು ಅದು ಹೇಳಿದೆ.  

ಪ್ಯಾರಿಸ್ ಮೂಲದ ಪತ್ರಕರ್ತೆ ನೂಪುರ್ ತಿವಾರಿ ಅವರು ‘ಜೂನ್ 23ರಂದು ಎಎಫ್ 217 ವಿಮಾನದಲ್ಲಿ ಮುಂಬೈನಿಂದ ಬಂದ ಪ್ರಯಾಣಿಕರು ಪ್ಯಾರಿಸ್‌ನಲ್ಲಿ ಇಳಿದಿದ್ದರು. ಅವರು ಟೊರೆಂಟೊಗೆ ಎಎಫ್‌ 356 ವಿಮಾನದಲ್ಲಿ ಹೋಗಬೇಕಿತ್ತು. ಆದರೆ, ಆ ವಿಮಾನದ ಸಂಚಾರ ರದ್ದಾಯಿತು’ ಎಂದು ಸರಣಿ ಟ್ವೀಟ್‌ ಮಾಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT