ಬೀಜಿಂಗ್: ಚೀನಾದ ಲಿಯೋನಿಂಗ್ ಪ್ರಾಂತ್ಯದ ಹುಲುಡಾವೊದಲ್ಲಿ ಧಾರಾಕಾರ ಮಳೆಯಾಗಿದೆ. ಮಳೆ ಸಂಬಂಧಿತ ಅವಘಡಗಳಲ್ಲಿ 11 ಜನರು ಮೃತಪಟ್ಟಿದ್ದು, 14 ಮಂದಿ ಕಾಣೆಯಾಗಿದ್ದಾರೆ.
ಮಳೆಯಿಂದಾಗಿ ಹುಲುಡಾವೊ ನಗರದ 1.88 ಲಕ್ಷ ಜನರು ತೊಂದರೆಗೀಡಾಗಿದ್ದಾರೆ. ₹12,69 ಕೋಟಿ ಮೌಲ್ಯದ ರಸ್ತೆ, ಸೇತುವೆ, ಮನೆಗಳು ಮತ್ತು ಅಪಾರ ಪ್ರಮಾಣದ ಬೆಳೆ ನಾಶವಾಗಿವೆ ಎಂದು ಸ್ಥಳೀಯ ಮಾಧ್ಯಮವು ವರದಿ ಮಾಡಿದೆ.
ಅಲ್ಲದೇ, ಒಂಭತ್ತು ರಾಷ್ಟ್ರೀಯ ಹಾಗೂ ಪ್ರಮುಖ ಪ್ರಾಂತೀಯ ರಸ್ತೆಗಳು, 210 ಗ್ರಾಮೀಣ ರಸ್ತೆಗಳು ಮತ್ತು 187 ಸೇತುವೆಗಳು ಹಾನಿಗೊಳಗಾಗಿವೆ ಎಂದು ಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ.