ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಿಬಿಯಾ ಬೋಟ್‌ ದುರಂತ: ಮಾಲಿಯ 22 ಮಂದಿ ಸಾವು

ವಿಶ್ವಸಂಸ್ಥೆ ಮಾಹಿತಿ
Last Updated 5 ಜುಲೈ 2022, 20:13 IST
ಅಕ್ಷರ ಗಾತ್ರ

ಜಿನಿವಾ: ಲಿಬಿಯಾ ಕರಾವಳಿಯಲ್ಲಿ ಸಂಭವಿಸಿದ ಬೋಟ್‌ ದುರಂತದಲ್ಲಿ ಮಾಲಿ ದೇಶದ 22 ಮಂದಿ ವಲಸಿಗರು ಮೃತಪಟ್ಟಿದ್ದಾರೆ ಎಂದು ವಿಶ್ವಸಂಸ್ಥೆ ಮಂಗಳವಾರ ತಿಳಿಸಿದೆ.

ವಲಸಿಗರುಜೂನ್‌ 22ರಂದು ಲಿಬಿಯಾದ ಝುವರಾ ನಗರದಿಂದ ರಬ್ಬರ್‌ ಬೋಟ್‌ನಲ್ಲಿ ಪ್ರಯಾಣ ಬೆಳೆಸಿದ್ದರು. ಘಟನೆ ನಡೆದ 9 ದಿನಗಳ ಬಳಿಕ 61 ಮಂದಿಯನ್ನು ಲಿಬಿಯಾ ಕರಾವಳಿ ಪಡೆ ರಕ್ಷಿಸಿ ತೀರಕ್ಕೆ ಕರೆತಂದಿದೆ. ಬದುಕುಳಿದವರಲ್ಲಿ ಬಹುತೇಕರು ಮಾಲಿ ದೇಶದವರು ಎಂದುವಿಶ್ವಸಂಸ್ಥೆಯ ವಲಸಿಗರ ಅಂತಾರಾಷ್ಟ್ರೀಯ ಸಂಸ್ಥೆ ತಿಳಿಸಿದೆ.

ನೀರಿನಲ್ಲಿ ಮುಳುಗಿ ಮತ್ತು ನಿರ್ಜಲೀಕರಣದಿಂದ 22 ಮಂದಿ ವಲಸಿಗರು ಮೃತಪಟ್ಟಿದ್ದಾರೆ ಎಂದು ಬದುಕುಳಿದವರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT