ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಲಂಬಿಯಾದ ಕಲ್ಲಿದ್ದಲು ಗಣಿ ಸ್ಫೋಟದಲ್ಲಿ 3 ಮಂದಿ ಸಾವು 

Last Updated 21 ಏಪ್ರಿಲ್ 2023, 4:37 IST
ಅಕ್ಷರ ಗಾತ್ರ

ಬೊಗೋಟಾ: ಕುಕುನುಬಾ ಕಲ್ಲಿದ್ದಲು ಗಣಿ ಸ್ಫೋಟದಲ್ಲಿ ಕಾಣೆಯಾದ ಏಳು ನೌಕರರ ಪೈಕಿ ಮೂವರು ಶವವಾಗಿ ಪತ್ತೆಯಾಗಿದ್ದಾರೆ ಎಂದು ಕೊಲಂಬಿಯಾದ ರಾಷ್ಟ್ರೀಯ ಗಣಿಗಾರಿಕೆ ಸಂಸ್ಥೆ ತಿಳಿಸಿದೆ.

ಇಲ್ಲಿ ಸಂಭವಿಸಿದ ಸ್ಫೋಟದಲ್ಲಿ ಕನಿಷ್ಠ ಏಳು ನೌಕರರು ನಾಪತ್ತೆಯಾಗಿದ್ದರು ಎಂದು ಗವರ್ನರ್ ನಿಕೋಲಸ್ ಗಾರ್ಸಿಯಾ ಅವರು ಹೇಳಿದ್ದಾರೆ.

‘ಏಳು ಜನರಿಗಾಗಿ ಶೋಧ ಕಾರ್ಯಾಚರಣೆಯನ್ನು ನಡೆಸುತ್ತಿರುವಾಗ ನಾಲ್ವರನ್ನು ಜೀವಂತವಾಗಿ ಪತ್ತೆಯಾಗಿದ್ದಾರೆ. ಎಂದು ರಕ್ಷಣಾ ತಂಡ ಹೇಳಿದೆ. ಈ ವರದಿಯನ್ನು ಗಾರ್ಸಿಯಾ ಉಲ್ಲೇಖಿಸಿ ಗುರುವಾರ ಟ್ವಿಟರ್‌ನಲ್ಲಿ ಪೋಸ್ಟ್ ಪ್ರಕಟಿಸಿದ್ದಾರೆ.

ಸ್ಥಳೀಯ ಕಾಲಮಾನ ಪ್ರಕಾರ ಗುರುವಾರ ಮಧ್ಯರಾತ್ರಿ 1 ಗಂಟೆಗೆ ಸುಮಾರಿಗೆ ಸ್ಫೋಟ ಸಂಭವಿಸಿದೆ.

ರಾಷ್ಟ್ರೀಯ ಗಣಿ ಸಂಸ್ಥೆ, ನಾಗರಿಕ ರಕ್ಷಣಾ ಪಡೆ, ಅಗ್ನಿಶಾಮಕ ಇಲಾಖೆಯ ತಂಡಗಳು ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದೆ ಎಂದು ಗಣಿ ಮತ್ತು ಇಂಧನ ಸಚಿವ ಐರಿನ್ ವೆಲೆಜ್ ಸಾಮಾಜಿಕ ಮಾಧ್ಯಮದಲ್ಲಿ ವಿವರಿಸಿದ್ದಾರೆ.

‘900 ಮೀಟರ್‌ಗಿಂತಲೂ ಹೆಚ್ಚು ಆಳವಿರುವ ಗಣಿಗಳಲ್ಲಿ ಇಂಗಾಲದ ಮಾನಾಕ್ಸೈಡ್, ಮೀಥೇನ್ ಅನಿಲ ಮತ್ತು ಕಲ್ಲಿದ್ದಲಿನ ಧೂಳಿ ಆವರಿಸುವುದರಿಂದ ಅದರೊಳಗೆ ಪ್ರವೇಶಿಸುವುದು ಕಷ್ಟಕರವಾಗಿದೆ’ ಎಂದು ಅಗ್ನಿಶಾಮಕ ಅಧಿಕಾರಿ ಅಲ್ವಾರೊ ಫರ್ಫಾನ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಸ್ಫೋಟಕ್ಕೆ ಒಳಗಾಗಿರುವ ಗಣಿಗಳನ್ನು ಎಲ್ ರೋಬಲ್, ಎಲ್ ಕಾಂಡೋರ್ ಮತ್ತು ಎಲ್ ಮಾಂಟೊ ಎಂದು ಕರೆಯಲಾಗಿದೆ. ಅಪಘಾತಕ್ಕೆ ಕಾರಣವೆನೆಂದು ತನಿಖೆ ನಡೆಸಲಾಗುತ್ತಿದೆ ಎಂದು ಅಧಿಕಾರಿ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT