ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿದ್ಯುತ್‌ ಉಳಿತಾಯಕ್ಕಾಗಿ ಪಾಕಿಸ್ತಾನದಲ್ಲಿ ರಾತ್ರಿ 8.30ಕ್ಕೆ ಮಾರುಕಟ್ಟೆ ಬಂದ್

Last Updated 3 ಜನವರಿ 2023, 15:19 IST
ಅಕ್ಷರ ಗಾತ್ರ

ಇಸ್ಲಾಮಾಬಾದ್: ವಿದ್ಯುತ್‌ ಉಳಿತಾಯಕ್ಕಾಗಿ ಹೊಸ ಇಂಧನ ಸಂರಕ್ಷಣಾ ಯೋಜನೆಯನ್ನು ಸರ್ಕಾರ ಅನುಮೋದಿಸಿದ್ದು, ದೇಶದಲ್ಲಿನ ಮಾರುಕಟ್ಟೆಗಳು ಮತ್ತು ಮಾಲ್‌ಗಳು ರಾತ್ರಿ 8:30 ಕ್ಕೆ ಮುಚ್ಚಲಿವೆ‌‌‌‌‌ ಎಂದು ಪಾಕಿಸ್ತಾನದ ರಕ್ಷಣಾ ಸಚಿವ ಖವಾಜಾ ಆಸಿಫ್ ಮಂಗಳವಾರ ಹೇಳಿದ್ದಾರೆ.

ವಿದ್ಯುತ್‌ ಹೀರುವ ಅಸಮರ್ಥ ಉಪಕರಣಗಳ ಬಳಕೆ ನಿಷೇಧಿಸಲು ಪಾಕಿಸ್ತಾನ ಮುಂದಾಗಿದೆ. ಇದರಿಂದ ವಾರ್ಷಿಕವಾಗಿ ₹ 62 ಶತಕೋಟಿ ಉಳಿತಾಯವಾಗಲಿದೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ.

ಪತ್ರಿಕಾಗೋಷ್ಠಿಯಲ್ಲಿ ಆಸಿಫ್ ಅವರು ಕ್ಯಾಬಿನೆಟ್ ನಿರ್ಧಾರವನ್ನು ಪ್ರಕಟಿಸಿದ್ದಾರೆ. ಎಲ್ಲಾ ಸರ್ಕಾರಿ ಇಲಾಖೆಗಳ ವಿದ್ಯುತ್ ಬಳಕೆಯನ್ನು ಶೇಕಡಾ 30 ರಷ್ಟು ಕಡಿತಗೊಳಿಸಬೇಕು. ಅನಗತ್ಯ ವಿದ್ಯುತ್‌ ಬಳಕೆಗೆ ಕಡಿವಾಣ ಹಾಕಬೇಕೆಂದು ಪ್ರಧಾನ ಮಂತ್ರಿ ಶೆಹಬಾಜ್ ಷರೀಫ್ ಅವರು ಸಂಬಂಧಪಟ್ಟ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ ಎಂದು ರಕ್ಷಣಾ ಸಚಿವರು ಹೇಳಿದರು.

ಈ ಆದೇಶದ ಅನ್ವಯ ಸಾಂಕೇತಿಕವಾಗಿ ಕ್ಯಾಬಿನೆಟ್ ಸಭೆಯನ್ನು ಕೂಡ ಯಾವುದೇ ವಿದ್ಯುತ್ ಬಳಸದೆ ನಡೆಸಲಾಗಿದೆ ಎಂದು ಜಿಯೋ ನ್ಯೂಸ್ ವರದಿ ಮಾಡಿದೆ.

ಹೊಸ ಆದೇಶದಂತೆ ಮದುವೆ ಹಾಲ್‌ಗಳನ್ನು ರಾತ್ರಿ 10 ಗಂಟೆಗೆ ಮತ್ತು ಮಾರುಕಟ್ಟೆಗಳನ್ನು ರಾತ್ರಿ 8:30 ಕ್ಕೆ ಮುಚ್ಚಲಾಗುವುದು ಎಂದು ಅವರು ಹೇಳಿದರು. ವಿದ್ಯುತ್ ಚಾಲಿತ ಫ್ಯಾನ್‌ಗಳನ್ನು ಉತ್ಪಾದಿಸುವ ಕಾರ್ಖಾನೆಗಳನ್ನು ಸ್ಥಗಿತಗೊಳಿಸಲಾಗುವುದು ಎಂದು ಆಸಿಫ್ ಘೋಷಿಸಿದರು. 60-80 ವ್ಯಾಟ್‌ ವಿದ್ಯುತ್‌ ಬಳಸುವ ಮಿತವ್ಯಯಿ ಫ್ಯಾನ್‌ಗಳು ಮಾರುಕಟ್ಟೆಯಲ್ಲಿವೆ. ಹೀಗಾಗಿ 120-130 ವ್ಯಾಟ್ ವಿದ್ಯುತ್ ಅಗತ್ಯವಿರುವ ಫ್ಯಾನ್‌ಗಳ ಉತ್ಪಾದನೆಯನ್ನೇ ಸ್ಥಗಿತಗೊಳಿಸುತ್ತೇವೆ ಎಂದು ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT