ಶನಿವಾರ, 23 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Morocco Earthquake: 2,800 ದಾಟಿದ ಸಾವಿನ ಸಂಖ್ಯೆ

Published 12 ಸೆಪ್ಟೆಂಬರ್ 2023, 4:04 IST
Last Updated 12 ಸೆಪ್ಟೆಂಬರ್ 2023, 4:04 IST
ಅಕ್ಷರ ಗಾತ್ರ

ಮಾರುಕೇಶ್: ಪ್ರಬಲ ಭೂಕಂಪ ಸಂಭವಿಸಿದ್ದ ಮೊರೊಕ್ಕೊದಲ್ಲಿ ಮಂಗಳವಾರ ಮೃತಪಟ್ಟವರ ಸಂಖ್ಯೆ 2,800ರ ಗಡಿ ದಾಟಿದೆ.

ಈ ದುರಂತದಲ್ಲಿ 2,500ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂದು ಮೊರಕ್ಕೊ ಆಂತರಿಕ ಸಚಿವಾಲಯ ತಿಳಿಸಿದೆ.

ಮಾರುಕೇಶ್‌ನ ನೈಋತ್ಯದ ಅಲ್ ಹೌಜ್ ಪ್ರಾಂತ್ಯದಲ್ಲಿ ಹೆಚ್ಚಿನ ಸಂಖ್ಯೆಯ ಪ್ರಾಣ ಹಾನಿ ಉಂಟಾಗಿದೆ ಎಂದು ಹೇಳಿದೆ.

ವಿವಿಧ ಪ್ರದೇಶಗಳಲ್ಲಿ ಅವಶೇಷಗಳಡಿ ಸಿಲುಕಿದವರ ರಕ್ಷಣೆಗೆ ಶೋಧ ಕಾರ್ಯ ಮುಂದುವರಿದಿದೆ.

ಕಳೆದ ಶುಕ್ರವಾರ ಮಧ್ಯರಾತ್ರಿ ರಿಕ್ಟರ್ ಮಾಪಕದಲ್ಲಿ 6.8ರಷ್ಟು ಭೂಕಂಪ ಸಂಭವಿಸಿತ್ತು.

ಸ್ಪೇನ್, ಬ್ರಿಟನ್, ಕತಾರ್ ಹಾಗೂ ಯುಎಇನಿಂದ ಆಗಮಿಸಿದ ತಂಡಗಳು ಮೊರಕ್ಕೊ ಜೊತೆ ರಕ್ಷಣಾ ಕಾರ್ಯಕ್ಕೆ ಕೈಜೋಡಿಸಿವೆ. ಇತರೆ ಅನೇಕ ರಾಷ್ಟ್ರಗಳು ನೆರವಿನ ಭರವಸೆ ನೀಡಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT