ಲಂಡನ್: ಬ್ರಿಟನ್ನ ಆಶ್ರಯ ಕೋರಿದ್ದ ವಲಸಿಗ ವ್ಯಕ್ತಿಯನ್ನು ಫ್ರಾನ್ಸ್ಗೆ ಗಡಿಪಾರು ಮಾಡಲು ಮುಂದಾಗಿದ್ದ ಬ್ರಿಟನ್ ಸರ್ಕಾರದ ಕ್ರಮಕ್ಕೆ ಇಲ್ಲಿನ ನ್ಯಾಯಾಲಯವೊಂದು ತಾತ್ಕಾಲಿಕ ತಡೆ ನೀಡಿದೆ.

ಪೂರ್ವ ಆಫ್ರಿಕಾದ ಎರಿಟ್ರಿಯಾ ಮೂಲದ ವ್ಯಕ್ತಿಯು ಫ್ರಾನ್ಸ್ ಮೂಲಕ ಲಂಡನ್ ತಲುಪಿದ್ದು, ಇಲ್ಲಿನ ಸರ್ಕಾರದಿಂದ ಆಶ್ರಯ ಕೋರಿದ್ದ. ಆತನ ಕೋರಿಕೆ ತಿರಸ್ಕರಿಸಿದ್ದ ಸರ್ಕಾರ, ಫ್ರಾನ್ಸ್ನಲ್ಲಿ ಆಶ್ರಯ ಕೋರುವಂತೆ ಸೂಚಿಸಿ ಅಲ್ಲಿಗೆ ವಾಪಸ್ ಕಳುಹಿಸಲು ನಿರ್ದೇಶಿಸಿತ್ತು. ಬುಧವಾರ ಆತ ಫ್ರಾನ್ಸ್ಗೆ ತೆರಳಬೇಕಿತ್ತು.

ಆದರೆ, ತನ್ನ ಗಡಿಪಾರು ಪ್ರಶ್ನಿಸಿ ನ್ಯಾಯಾಲಯದ ಮೆಟ್ಟಿಲೇರಿರುವ ವಲಸಿಗ, ‘ಮಾನವ ಕಳ್ಳಸಾಗಣೆಯ ಮೂಲಕ ತನ್ನನ್ನು ಬ್ರಿಟನ್ಗೆ ಕರೆತರಲಾಗಿದೆ’ ಎಂದು ಹೇಳಿಕೊಂಡಿದ್ದಾನೆ.

ಆತನ ಮನವಿಯನ್ನು ಪುರಸ್ಕರಿಸಿರುವ ನ್ಯಾಯಾಲಯವು, ‘ವಲಸಿಗ ವ್ಯಕ್ತಿಯು ತಾನು ಮಾನವ ಕಳ್ಳಸಾಗಣೆಯ ಬಲಿಪಶು ಎಂದು ಹೇಳಿಕೊಂಡಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಸೂಕ್ತ ರೀತಿಯಲ್ಲಿ ತನಿಖೆ ನಡೆದಿದೆಯೇ ಎಂಬುದನ್ನು ಪರಿಶೀಲಿಸಲು ಹಾಗೂ ವಲಸಿಗ ವ್ಯಕ್ತಿಯ ಹೇಳಿಕೆಗಳಿಗೆ ಪೂರಕವಾಗಿ ಅವರು ಸಾಕ್ಷಿಗಳನ್ನು ಪ್ರಸ್ತುತಪಡಿಸಲು ಅವಕಾಶ ನೀಡುವುದಕ್ಕಾಗಿ ಗಡಿಪಾರಿಗೆ ತಾತ್ಕಾಲಿಕ ತಡೆ ನೀಡಲಾಗುತ್ತಿದೆ’ ಎಂದು ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.