ಜುನೊ, ಅಲಾಸ್ಕ: ಇಲ್ಲಿನ ಪಶ್ಚಿಮ ಅಲಾಸ್ಕದಲ್ಲಿ ಲಘು ಪ್ರಯಾಣಿಕ ವಿಮಾನವೊಂದು ಪತನಗೊಂಡಿದ್ದು, ಅದರಲ್ಲಿದ್ದ 10 ಮಂದಿ ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

‘ವಿಮಾನವು ಸಂದೇಶ ರವಾನಿಸಿದ ಕೊನೆಯ ಸ್ಥಳದಲ್ಲಿ ಹೆಲಿಕಾಪ್ಟರ್ ಮೂಲಕ ಶೋಧ ಕಾರ್ಯ ನಡೆಸಿದ ವೇಳೆ, ಹಿಮದ ರಾಶಿ ಮೇಲೆ ವಿಮಾನದ ಅವಶೇಷಗಳು ಪತ್ತೆಯಾಗಿವೆ’ ಎಂದು ಅಮೆರಿಕದ ಕರಾವಳಿ ರಕ್ಷಣಾ ಪಡೆಯ ವಕ್ತಾರ ಮೈಕ್ ಸಲೆರ್ನೊ ತಿಳಿಸಿದ್ದಾರೆ.

‘ವಿಮಾನವು ತನ್ನ ಸಾಮರ್ಥ್ಯದ ಗರಿಷ್ಠ ಪ್ರಯಾಣಿಕರನ್ನು ಹೊತ್ತೊಯ್ಯುತಿತ್ತು. ಇಲ್ಲಿನ ಉನಲಾಕ್ಲೀಟ್ನಿಂದ ಮಧ್ಯಾಹ್ನ 2.37ಕ್ಕೆ ಹೊರಟಿದ್ದ ವಿಮಾನದಲ್ಲಿ 9 ಮಂದಿ ಪ್ರಯಾಣಿಕರು ಹಾಗೂ ಒಬ್ಬ ಪೈಲಟ್ ಇದ್ದರು. ಹಾರಾಟ ಆರಂಭಿಸಿದ ಒಂದು ಗಂಟೆಯಲ್ಲಿ ಸಂಪರ್ಕ ಕಡಿದುಕೊಂಡಿತ್ತು’ ಎಂದು ಬೆರಿಂಗ್ ಏರ್ನ ಕಾರ್ಯನಿರ್ವಹಣಾ ನಿರ್ದೇಶಕ ಡೇವಿಡ್ ಒಲ್ಸಾನ್ ತಿಳಿಸಿದರು.

‘ವಿಮಾನವು ಹಾರಾಟ ನಡೆಸಿದ ಜಾಗದಿಂದ ಆಗ್ನೇಯ ದಿಕ್ಕಿನ 30 ಕಿ.ಮೀ ದೂರದಲ್ಲಿ ಪತ್ತೆಯಾಗಿದೆ. ಕಡಲಾಚೆಯಿಂದ 12 ಕಿ.ಮೀ ದೂರದಲ್ಲಿದೆ’ ಎಂದು ರಕ್ಷಣಾ ಪಡೆ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.